ADVERTISEMENT

ಕೊಪ್ಪಳ: ಬನ್ನಿ ಮುಡಿದು ಸಂಭ್ರಮ ಪಟ್ಟ ಜನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 14:03 IST
Last Updated 5 ಅಕ್ಟೋಬರ್ 2022, 14:03 IST
ಕೊಪ್ಪಳದಲ್ಲಿ ನವರಾತ್ರಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ, ಸರಸ್ವತಿ, ದುರ್ಗೆ ವೇಷದಲ್ಲಿ ಕಾಣಿಸಿಕೊಂಡ ಮಕ್ಕಳು. ಅವರೊಂದಿಗೆ ಅತಿಥಿಗಳಿದ್ದಾರ
ಕೊಪ್ಪಳದಲ್ಲಿ ನವರಾತ್ರಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ, ಸರಸ್ವತಿ, ದುರ್ಗೆ ವೇಷದಲ್ಲಿ ಕಾಣಿಸಿಕೊಂಡ ಮಕ್ಕಳು. ಅವರೊಂದಿಗೆ ಅತಿಥಿಗಳಿದ್ದಾರ   

ಕೊಪ್ಪಳ: ನವರಾತ್ರಿಯ ಕೊನೆಯ ದಿನವಾದ ಬುಧವಾರ ನಗರದ ವಿವಿಧೆಡೆ ಬನ್ನಿ ಮುಡಿದು, ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

ಭಾಗ್ಯನಗರದಲ್ಲಿರುವ ತುಳಜಾ ಭವಾನಿ ದೇವಸ್ಥಾನದಲ್ಲಿ ಹೂಗಳಿಂದ ದೇವರ ಮೂರ್ರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಕೊನೆಯ ದಿನ ಮಾಡಲಾಗಿದ್ದ ಬೆಳ್ಳಿ ಕವಚದ ಅಲಂಕಾರ ಗಮನ ಸೆಳೆಯಿತು.

ಆಚರಣೆ: ‘ನಿತ್ಯೋತ್ಸವ ಎನ್ನುವಂತೆ ನಮ್ಮ ದೇಶದಲ್ಲಿ ಹಬ್ಬ ಹರಿದಿನಗಳು ಹಾಗೂ ಉತ್ಸವಗಳು ನಡೆಯುತ್ತಲೇ ಇರುತ್ತವೆ. ಹಬ್ಬಗಳ ಉದ್ದೇಶ ನಮ್ಮ ಜೀವನದಲ್ಲಿ ಪರಿವರ್ತನೆಯನ್ನು ತಂದುಕೊಳ್ಳವುದು. ಮನುಷ್ಯ ತನ್ನೊಳಗಿರುವ ಆಸುರಿ
ಗುಣಗಳನ್ನು ಸಂಹರಿಸಿ ದೈವಿಗುಣಗಳನ್ನು ಧಾರಣೆ ಮಾಡುವುದೇ ನವರಾತ್ರಿ ಹಬ್ಬದ ಆಚರಣೆಯ ಉದ್ದೇಶ’ ಎಂದು ಬ್ರಹ್ಮಕುಮಾರಿ ಯೋಗಿನಿ ಹೇಳಿದರು.

ADVERTISEMENT

ನವರಾತ್ರಿ ಉತ್ಸವ ಸಮಿತಿ ಇಲ್ಲಿನ ಪಲ್ಲೇದರ ಓಣಿಯಲ್ಲಿ ಏರ್ಪಡಿಸಿದ ನವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘
ದಸರಾ ಹಬ್ಬವನ್ನು 9 ದಿನಗಳ ಕಾಲ ಆಚರಿಸುತ್ತೇವೆ. ದಶಕಂಠನಾದ ರಾವಣನ ಸಂಹಾರ ಮಾಡುವುದು ಎಂದರೆ ಸ್ತ್ರೀ, ಪುರುಷರಲ್ಲಿರುವ ಪಂಚ ವಿಕಾರಿ ಗುಣಗಳನ್ನು ಸಂಹರಿಸುವುದು’ ಎಂದರು.

ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.