ADVERTISEMENT

ಕೊರೊನಾ ಭಯ ಬೇಡ: ಜಾಗೃತಿ ಅಗತ್ಯ: ಸಂತೋಷ್ ಎಚ್. ಎಂ.

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 2:28 IST
Last Updated 22 ಜೂನ್ 2021, 2:28 IST
ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಬಡವರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಯಿತು
ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಬಡವರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಯಿತು   

ಸಿದ್ದಾಪುರ (ಕಾರಟಗಿ):‘ಕೊರೊನಾ ಕುರಿತ ಆತಂಕ ದೂರ ಮಾಡಿ, ಜಾಗೃತಿ ಕ್ರಮಗಳನ್ನು ಅನುಸರಿಸಿಕೊಂಡು ಅದರಿಂದ ಮುಕ್ತರಾಗೋಣ’ ಎಂದು ಜಿಲ್ಲಾ ಜನಸಹಾಯ ಕೆಸಿವಿಟಿ ಹೆಲ್ಪ್‌ಲಿಂಕ್ಸಂಯೋಜಕ ಸಂತೋಷ್ ಎಚ್. ಎಂ. ಹೇಳಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದ 4ನೇ ವಾರ್ಡ್‌ನಲ್ಲಿ ಬಡವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಸರ್ಕಾರದ ನೀತಿ, ನಿಯಮ ಪಾಲಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಗೆ ಕೈಜೋಡಿಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಶೀಘ್ರವೇ ತಜ್ಞ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ADVERTISEMENT

ಕೊಪ್ಪಳ ಜಿಲ್ಲಾ ಜನಸಹಾಯ ಕೆಸಿವಿಟಿ ಹೆಲ್ಪ್‌ಲಿಂಕ್ ಮುಖ್ಯಸ್ಥ ಎಂ.ಡಿ.ಸಿರಾಜ್, 4ನೇ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯ ಅಜೀಂ ಮುದ್ದೀನ್, ಮಂಜುನಾಥ ಎನ್., ಅನಿಲ್ ಕುಮಾರ್, ಸಾದೀಕ್ ಎಸ್, ಕಲೀಮ್ ಹಿರೇಮನಿ, ಸೋಹಿಲ್ ಹಿರೇಮನಿ ಹಾಗೂ ಮುಮತಾಜ್ ಬೇಗಂ ಸೋಲ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.