ADVERTISEMENT

ಮುನಿರಾಬಾದ್ | ಐಪಿ ಸೆಟ್‌ಗೆ ಆಧಾರ್ ಜೋಡಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:09 IST
Last Updated 23 ಜುಲೈ 2024, 16:09 IST

ಮುನಿರಾಬಾದ್: ನೀರಾವರಿ ಪಂಪ್‌ಸೆಟ್‌ಗಳಿಗೆ(ಐ.ಪಿ.ಸೆಟ್) ಅಧಿಕೃತ ವಿದ್ಯುತ್ ಸಂಪರ್ಕ ಹೊಂದಿರುವ ಎಲ್ಲಾ ವಿದ್ಯುತ್ ಸ್ಥಾವರಗಳ ರೈತರು ಆರ್‌.ಆರ್. (ವಿದ್ಯುತ್ ಮೀಟರ್) ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ತನ್ನ ಗ್ರಾಹಕರಿಗೆ ಜೆಸ್ಕಾಂ ಸೂಚನೆ ನೀಡಿದೆ.

ಆರ್‌.ಆರ್.ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಲಾದ ಆರ್‌.ಆರ್. ಸಂಖ್ಯೆಗಳಿಗೆ ಮಾತ್ರ ಸರ್ಕಾರದ ವಿದ್ಯುತ್‌ಗೆ ಸಂಬಂಧಿಸಿದ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ) ಆದೇಶ ಹೊರಡಿಸಿದೆ.
ಅದರಂತೆ ಜೆಸ್ಕಾಂ ಮುನಿರಾಬಾದ್ ವ್ಯಾಪ್ತಿಯ ಎಲ್ಲಾ ಅಧಿಕೃತ ಐ.ಪಿ. ಸೆಟ್ ಹೊಂದಿರುವ ವಿದ್ಯುತ್ ಸ್ಥಾವರಗಳ ಆರ್‌.ಆರ್. ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ಎಲ್ಲಾ ರೈತರಿಗೆ ಮೌಖಿಕವಾಗಿ, ಲಿಖಿತ ರೂಪದಲ್ಲಿ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಐ.ಪಿ.ಸೆಟ್ ಗ್ರಾಹಕರಿಗೆ ಪ್ರಚುರ ಪಡಿಸಲಾಗಿರುತ್ತದೆ.
ಆದರೂ ಬಹಳಷ್ಟು ಗ್ರಾಹಕರು ವಿದ್ಯುತ್ ಸ್ಥಾವರಗಳ ಆರ್‌.ಆರ್. ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿರುವುದಿಲ್ಲ. ಆದ್ದರಿಂದ ಕೆ.ಇ.ಆರ್.ಸಿ. ಆದೇಶದ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸದ ಅಧಿಕೃತ ಐ.ಪಿ. ಸೆಟ್ ಗ್ರಾಹಕರು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ಕೋರಲಾಗಿದೆ. ತಪ್ಪಿದಲ್ಲಿ ಸರ್ಕಾರದ ಸಬ್ಸಿಡಿ ಮೊತ್ತಕ್ಕೆ ಅರ್ಹರಾಗುವುದಿಲ್ಲ ಎಂದು ಜೆಸ್ಕಾಂ ಮುನಿರಾಬಾದ್‌ನ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT