ADVERTISEMENT

ಸೌಕರ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2021, 12:10 IST
Last Updated 23 ಮೇ 2021, 12:10 IST

ಕೊಪ್ಪಳ: ‘ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಮೂಲಕ ಜನರ ಜೀವ ಉಳಿಸಬೇಕು’ ಎಂದು ಆಗ್ರಹಿಸಿಎಐಡಿವೈಒ ಆನ್‌ಲೈನ್‌ ಪ್ರತಿಭಟನೆ ನಡೆಸಿತು.

ಜಿಲ್ಲೆಯ ಯುವಜನರು ಹಾಗೂ ನಾಗರಿಕರು ಬೇಡಿಕೆಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ತಮ್ಮ ಭಾವಚಿತ್ರಗಳನ್ನು ಕಳಿಸುವ ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಹಾಕುವ ಮೂಲಕ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಜ್ಞ ಸಿಬ್ಬಂದಿ ನೇಮಕ,ಗುತ್ತಿಗೆ ನೌಕರರ ಕಾಯಂ ಮಾಡಿಕೊಳ್ಳುವುದು,ಕೋವಿಡ್ ನಿರ್ವಹಣೆಗೆ ಎಲ್ಲಪಿ.ಎಚ್.ಸಿ ಮತ್ತು ಸಿ.ಎಚ್.ಸಿ ಸಜ್ಜುಗೊಳಿಸುವುದು,ಮೂರನೇ ಅಲೆಯನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆ ಬಲಪಡಿಸಿ,ಎಲ್ಲರಿಗೂ ಉಚಿತ ಲಸಿಕೆ ಒದಗಿಸುವುದು,ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರ ತೆರೆಯಬೇಕು. ರಾಜ್ಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣವನ್ನು ಗಣನೀಯವಾಗಿ ಹೆಚ್ಚಿಸಿ ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.

ADVERTISEMENT

ಆನ್‌ಲೈನ್ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾಕಾರ ಶರಣು ಪಾಟೀಲ, ಶರಣು ಗಡ್ಡಿ, ಮಾರುತಿ, ಪ್ರವೀಣ್ ಶರಣು ಅಂಗಡಿ, ಮಂಜುನಾಥ್, ವಿರುಪಾಕ್ಷಿ, ಕುಮಾರ, ಬಸವರಾಜ್, ಚಂದ್ರಶೇಖರ, ಕೃಷ್ಣ, ಮೌನೇಶ್, ರಾಜ, ಮರಿಯಪ್ಪ ಜೀವನ್,ಹನುಮಂತ ಹಾಗೂ ಭರಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.