ಗಂಗಾವತಿ: ಲೋಕಸಭಾ ಚುನಾವಣೆ ನಿಮಿತ್ತ ಮತದಾರರನ್ನು ಸೆಳೆಯಲು ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾ.ಪಂ ವ್ಯಾಪ್ತಿಯ ಹಿರೇಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಲಿ ಚಿತ್ರಕಲೆ ಮೂಲಕ ಗಂಗಾವತಿ ಕ್ಷೇತ್ರದ ಐತಿಹಾಸಿಕ ತಾಣಗಳ ಚಿತ್ರಬಿಡಿಸಿ, ಮಾದರಿ ಮತಗಟ್ಟೆ ರಚಿಸಲಾಗಿದೆ.
ಗಂಗಾವತಿ ಕ್ಷೇತ್ರದಲ್ಲಿ ರಾಮಾಯಣ, ವಿಜಯನಗರ ಸಾಮ್ರಾಜ್ಯ ಕಾಲಕ್ಕೆ ಸಂಬಂಧಿಸಿದ ಮಂಟಪ, ದೇವಸ್ಥಾನ, ಕೋಟೆಗಳಿದ್ದು, ಇವುಗಳ ಇತಿಹಾಸ ತಿಳಿಸುವುದರ ಜತೆಗೆ ಮತದಾನ ಜಾಗೃತಿ ಮೂಡಿಸಲು ಶಾಲೆಯ ಗೊಡೆಗಳಿಗೆ ಚಿತ್ರಗಳು ಬಿಡಿಸಲಾಗಿದೆ. ಮತಗಟ್ಟೆ ಗೋಡೆಗಳ ಮೇಲೆ ಹಿರೇಬೆಣಕಲ್‌ನ ಮೋರೆರ ಬೆಟ್ಟ, ಆನೆಗೊಂದಿ 64 ಸಾಲಿನ ಮಂಟಪ, ಗಗನಮಹಲ್, ಆನೆಗೊಂದಿ ಕೋಟೆ (ವಾಲಿಕಿಲ್ಲಾ) ಚಿತ್ರಗಳನ್ನು ಅತ್ಯಾಕರ್ಷಕವಾಗಿ ಬಿಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.