ADVERTISEMENT

ಯೋಧರ ಸೇವೆಯಿಂದ ದೇಶದಲ್ಲಿ ನೆಮ್ಮದಿ: ನಿವೃತ್ತ ಸೈನಿಕನಿಗೆ ಗ್ರಾಮಸ್ಥರ ಸ್ವಾಗತ

ಗುಡಗೇರಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 7:30 IST
Last Updated 9 ಆಗಸ್ಟ್ 2023, 7:30 IST
ನಿವೃತ್ತ ಸೈನಿಕ ನಾಗಬಸಯ್ಯ ಅವರನ್ನು ಹೂಮಳೆಗೆರೆದು ಸ್ವಾಗತಿಸುತ್ತಿರುವದು.
ನಿವೃತ್ತ ಸೈನಿಕ ನಾಗಬಸಯ್ಯ ಅವರನ್ನು ಹೂಮಳೆಗೆರೆದು ಸ್ವಾಗತಿಸುತ್ತಿರುವದು.   

ಅಳವಂಡಿ: ದೇಶಕ್ಕಾಗಿಯೇ ತಮ್ಮ ಜೀನವನವನ್ನು ಮುಡುಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ ನಾಗಬಸಯ್ಯ ಹಿರೇಮಠ ಅವರನ್ನು ಮೆರವಣಿಗೆ ಮೂಲಕ ಅಳವಂಡಿ ಸಮೀಪದ ಗುಡಗೇರಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.

ಸೈನಿಕ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಹೂಮಳೆಗೈಯುತ್ತಾ, ಪಟಾಕಿ ಸಿಡಿಸುತ್ತಾ, ಡಿಜೆ ಮೇಳಕ್ಕೆ ಕುಣಿದು ಕುಪ್ಪಳಿಸಿದರು.   ನಂತರ ನಿವೃತ್ತ ಸೈನಿಕ ನಾಗಬಸಯ್ಯ ಹಿರೇಮಠ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ವಿಜಯಲಕ್ಷ್ಮೀ ಹಿರೇಮಠ ಮಾತನಾಡಿ, ‘ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವದರಿಂದ ನಾವೆಲ್ಲರೂ ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ’ ಎಂದರು.

ರೈತ ಸಂಘದ ಮುಖಂಡ ಪಂಚಯ್ಯ ಕುರ್ತಕೋಟಿ ಮಾತನಾಡಿ, ‘ಯುವಕರು ದೇಶಸೇವೆ ಸಲ್ಲಿಸಲು ಮುಂದೆ ಬರಬೇಕು ಇದು ಹೆಮ್ಮೆಯ ಕೆಲಸ‘ ಎಂದರು.

ADVERTISEMENT
ಗುಡಗೇರಿ ಗ್ರಾಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಸೈನಿಕ ನಾಗಬಸಯ್ಯ ಅವರನ್ನು ಗ್ರಾಮಸ್ಥರು ಮೆರವಣ ಗೆ ಮೂಲಕ ಸ್ವಾಗತಿಸಿದರು

ಇದೇ ಸಂದರ್ಭದಲ್ಲಿ 16 ಮಂದಿ ನಿವೃತ್ತ ಹಾಗೂ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುರೇಶಗೌಡ, ಶರಣಪ್ಪಗೌಡ, ಸಿದ್ದು, ರವಿ, ಕೆಲೋಡೆಪ್ಪ, ಸುರೇಶ, ವೆಂಕಪ್ಪ, ಮುತ್ತಯ್ಯ, ಬಸವರಾಜ, ತಹಶೀಲ್ದಾರ್, ನಾಗರಾಜ, ಲಕ್ಷ್ಮಣ, ಹನುಮಂತ, ಶೇಖರಯ್ಯ, ಶ್ರೀಕಾಂತ, ಶಾಂತಮ್ಮ, ಶ್ರೀದೇವಿ, ವೆಂಕಣ್ಣ ಆಡೂರ, ಶಂಕ್ರಯ್ಯ, ಚನ್ನಪ್ಪ ಗುಟಗನೂರ, ಶಿವಾನಂದಯ್ಯ, ಯಂಕಣ್ಣ ವರಕನಹಳ್ಳಿ, ಶಂಕರ, ಮಲ್ಲಪ್ಪ, ಸುರೇಶ, ಅಕ್ಬರ, ಅಜರುದ್ದೀನ, ಟಿಪ್ಪುಸುಲ್ತಾನ, ಬಾಷುಸಾಬ, ಶರಣಪ್ಪ, ಸಂಗಪ್ಪ, ಹೇಮರಡ್ಡಿ, ವಿರುಪಣ್ಣ, ಬಸವರಾಜ, ಶಿವಪ್ಪ, ಮಲ್ಲಪ್ಪ ಹಾಗೂ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೈನಿಕರು ಹಾಗೂ ಗ್ರಾಮದ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.