ADVERTISEMENT

ಅಳವಂಡಿ; ಪಿಕೆಪಿಎಸ್‌ ಚುನಾವಣೆ– ಬಿರುಸಿನ ಮತದಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:29 IST
Last Updated 12 ಜನವರಿ 2026, 7:29 IST
ಅಳವಂಡಿ ಸಮೀಪದ ಕವಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯಿತು 
ಅಳವಂಡಿ ಸಮೀಪದ ಕವಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯಿತು    

ಅಳವಂಡಿ: ಸಮೀಪದ ಕವಲೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಭಾನುವಾರ ಮತದಾನ ನಡೆಯಿತು.

ಮುಂದಿನ ಐದು ವರ್ಷದ ಅವಧಿಯ ನಿರ್ದೇಶಕರ ಆಯ್ಕೆಗೆ ಷೇರುದಾರರು ಬಿರುಸಿನಿಂದ ಮತದಾನ ಮಾಡಿದರು. ಒಟ್ಟು 12 ನಿರ್ದೇಶಕರಿದ್ದು 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಸಾಲಗಾರರ ಕ್ಷೇತ್ರದ ಒಟ್ಟು 641 ಮತದಾರರಲ್ಲಿ 474, ಸಾಲಗಾರರಲ್ಲದ ಕ್ಷೇತ್ರದ ಒಟ್ಟು 1325 ಮತದಾರರಲ್ಲಿ 698 ಮತದಾರರು ಹಕ್ಕು ಚಲಾಯಿಸಿದರು. ಬಸವರಾಜ ಜೋಗಿನ್ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಎಸ್ಐ ಪ್ರಹ್ಲಾದ್ ನಾಯಕ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.