ADVERTISEMENT

ಗಂಗಾವತಿ| ಬ್ಯಾನರ್‌ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:04 IST
Last Updated 11 ಜನವರಿ 2026, 6:04 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು   

ಗಂಗಾವತಿ: ಭಾನುವಾರ ನಡೆಯುವ ಶಾಸಕ ಜನಾರ್ದನ ರೆಡ್ಡಿ 60ನೇ ವರ್ಷದ ಜನ್ಮದಿನದ ನಿಮಿತ್ತ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಪೂರ್ವಯೋಜಿತ ಕೃತ್ಯ. ಉದ್ದೇಶ ಪೂರ್ವಕವಾಗಿಯೇ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಕೊಲೆ ಮಾಡುವ ಸಂಚು ರೂಪಿಸಿದ್ದಾರೆ. ಗಲಭೆಯಿಂದ ಓರ್ವ ಮೃತಪಟ್ಟಿದ್ದು ಅದರ ಹೊಣೆ ಭರತರೆಡ್ಡಿಯೇ ಹೊರಬೇಕು’ ಎಂದರು.

‘ರಾಶಿಗಟ್ಟಲೆ ಕಟ್ಟಿಗೆ, ಕಲ್ಲುಗಳ ಜತೆ ಖಾಸಗಿ ರೌಡಿಗಳನ್ನ ಕರೆತಂದು ಗಲಭೆ ನಡೆಸಿ ನಮ್ಮ ಮನೆಯ ಮೇಲೆ ಗುಂಡು ಹಾರಿಸಲಾಗಿದೆ. ಇದರಿಂದ ನಮಗೆಲ್ಲ ತುಂಬ ನೋವಾಗಿದೆ. ಎಲ್ಲ ಬಳ್ಳಾರಿ ಜನತೆ ಶಾಂತಿಯಿಂದ ಇರಬೇಕು. ಘಟನೆಗೆ ಕಾರಣವಾದ ಶಾಸಕ ಭರತ ರೆಡ್ಡಿ ಮೇಲೆ ಕ್ರಮವಾಗಬೇಕು, ನಮಗೆ ನ್ಯಾಯ ಸಿಗಬೇಕು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.