ADVERTISEMENT

ಕಾರಟಗಿ: ಮಳೆಯಿಂದಾಗಿ ಮನೆ ಛಾವಣಿ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:57 IST
Last Updated 16 ಜುಲೈ 2021, 6:57 IST
ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಸತತ ಸುರಿದ ಮಳೆಯಿಂದ ಕುಸಿದ ಹೋದ ಮನೆ ಛಾವಣಿ.
ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಸತತ ಸುರಿದ ಮಳೆಯಿಂದ ಕುಸಿದ ಹೋದ ಮನೆ ಛಾವಣಿ.   

ಕಾರಟಗಿ: ಪಟ್ಟಣ ಸಹಿತ ಇತರೆಡೆ 24 ಗಂಟೆಗಳ ಅವಧಿಯಲ್ಲಿ ನಿರಂತರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಾಲ್ಲೂಕಿನ ಸಿದ್ದಾಪುರದಲ್ಲಿ ಮಣ್ಣಿನ ಮನೆಯ ಛಾವಣಿ ಕುಸಿದಿದೆ. ಯಾವುದೇ ಅಪಾಯ
ಸಂಭವಿಸಿಲ್ಲ.

ಗುರುವಾರ ಬೆಳಗಿನವರೆಗೆ ಪಟ್ಟಣದ ವ್ಯಾಪ್ತಿಯಲ್ಲಿ 26.8 ಮಿ.ಮೀ, ಸಿದ್ದಾಪುರ ಭಾಗದಲ್ಲಿ 23. 2 ಮಿ.ಮೀ. ಮಳೆ ಆಗಿದೆ. ತಾಲ್ಲೂಕಿನ ಸಿದ್ದಾಪುರದ 4ನೇ ವಾರ್ಡ್‍ನಲ್ಲಿ ರಾಜೇಶ್ವರಿ ಬಾಲಪ್ಪ ಇವರಿಗೆ ಸೇರಿದ ಮಣ್ಣಿನ ಮನೆ ಛಾವಣಿ ಕುಸಿದು ಬಿದ್ದಿದೆ ಎಂದು ಕಂದಾಯ ಇಲಾಖೆಯ ಮೂಲಗಳು
ತಿಳಿಸಿವೆ.

ಬುಧವಾರ ವಾರದ ಸಂತೆ ಇದ್ದುದರಿಂದ ನಿರಂತರವಾಗಿ ಬಂದ ಮಳೆಯಿಂದ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ತರಕಾರಿ, ಹಣ್ಣು, ಕಾಯಿಪಲ್ಲೆ, ಕಾಳುಗಳನ್ನು ಮಾರಾಟ ಮಾಡಲು ಬಂದವರು ಮಳೆಯಲ್ಲಿಯೇ ನೆನೆದು ಕುಳಿತುಕೊಳ್ಳಬೇಕಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ವ್ಯಾಪಾರಿಗಳು ಪ್ರಯಾಸಪಡಬೇಕಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.