ADVERTISEMENT

ಅಳವಂಡಿ: ಆಲಿಕಲ್ಲು ಮಳೆ, ವಿವಿಧೆಡೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:06 IST
Last Updated 6 ಮೇ 2022, 4:06 IST
ಅಳವಂಡಿಯ ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಗೆ ಗಿಡ ಮರಗಳು ನೆಲಕ್ಕೆ ಉರುಳಿವೆ
ಅಳವಂಡಿಯ ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಗೆ ಗಿಡ ಮರಗಳು ನೆಲಕ್ಕೆ ಉರುಳಿವೆ   

ಅಳವಂಡಿ: ಅಳವಂಡಿಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ವಿವಿಧೆಡೆ ಬೆಳೆಗೆ ಹಾನಿಯಾಗಿದೆ. ಬಿರುಗಾಳಿಯಿಂದ ಕೆಲ ಗುಡಿಸಲುಗಳ ಮೇಲ್ಛಾವಣಿ ಹಾರಿಹೋದವು.

ಹಟ್ಟಿ, ಬೆಳಗಟ್ಟಿ, ಹಲವಾಗಲಿ, ಬೈರಾಪುರ ಹಾಗೂ ಮಂತಾದ ಗ್ರಾಮಗಳಲ್ಲಿ ಬಾಳೆ, ಹತ್ತಿ, ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ.

ಬೆಳಿಗ್ಗೆಯಿಂದ ಮೋದ ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನ ಆಗುತ್ತಿದ್ದಂತೆಯೇ ಸಣ್ಣ ಪ್ರಮಾಣದಲ್ಲಿ ಮಳೆ ಆರಂಭವಾಗತೊಡಗಿತು. ನಂತರ ಸಂಜೆಯಾಗುತ್ತಿದ್ದಂತೆ ಜೋರಾಗಿ ಬಿರುಗಾಳಿ ಬೀಸತೊಡಗಿತು.

ADVERTISEMENT

‘ಘಟನಾ ಸ್ಥಳಗಳಿಗೆ ಅಧಿಕಾರಿಗಳು ಕೂಡಲೇ ಬೇಟಿ ನೀಡಬೇಕು. ಪರಿಶೀಲನೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತರು
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.