ADVERTISEMENT

ಹಗ್ಗದ ಸಹಾಯದಿಂದ ದಡ ಸೇರಿದ ಕಾರ್ಮಿಕರು

ಮಳೆಯಿಂದ ತುಂಬಿ ಹರಿದ ಬಂಡಿಹಾಳ ಹಳ್ಳ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 3:15 IST
Last Updated 17 ಆಗಸ್ಟ್ 2021, 3:15 IST
ಯಲಬುರ್ಗಾ ತಾಲ್ಲೂಕು ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಹರಿಯುವ ಹಳ್ಳದಲ್ಲಿ ಕಾರ್ಮಿಕರು ಹಗ್ಗದ ಸಹಾಯದಿಂದ ದಡ ಸೇರಿದರು
ಯಲಬುರ್ಗಾ ತಾಲ್ಲೂಕು ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಹರಿಯುವ ಹಳ್ಳದಲ್ಲಿ ಕಾರ್ಮಿಕರು ಹಗ್ಗದ ಸಹಾಯದಿಂದ ದಡ ಸೇರಿದರು   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಬಂಡಿಹಾಳ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೂ ಭಾರಿ ಮಳೆ ಸುರಿಯಿತು.

ಬಂಡಿಹಾಳ ಗ್ರಾಮದ ಹಳ್ಳ ಭರ್ತಿಯಾಗಿ ರಭಸವಾಗಿ ಹರಿದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು.ಬೇರೆ ಗ್ರಾಮಗಳಿಂದ ಆಗಮಿಸಿದ್ದ ಕೂಲಿ ಕಾರ್ಮಿಕರನ್ನು ಗ್ರಾಮಸ್ಥರು ಹಗ್ಗಕಟ್ಟಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸಿ ಮನೆಗೆ ಕಳಿಸಿದರು.

ತಾಲ್ಲೂಕಿನ ಮಸಾರಿ ಭಾಗದ ದಮ್ಮೂರ, ಮಾರನಾಳ, ತುಮ್ಮರಗುದ್ದಿ, ಬಸಾಪುರ, ಗೆದಗೇರಿ ಸೇರಿದಂತೆ ಹಲವು ಗ್ರಾಮಗಳ ಕೂಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಹಳ್ಳ ದಾಟಿಸಲಾಯಿತು ಎಂದು ಸ್ಥಳೀಯರಾದ ಸಂತೋಷ ಬಂಡ್ರಿ, ಕೆರಿಬಸಪ್ಪ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.