
ತಾವರಗೇರಾ: ‘ಮನುಷ್ಯ ಹೆಚ್ಚೆಚ್ಚು ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಸಾಮಾನ್ಯ ಜ್ಞಾನದ ಜೊತೆ ಸಾಹಿತ್ಯ ಜ್ಞಾನ ಬೆಳೆಯುತ್ತದೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಮತ್ತು ಹೋಬಳಿ ಘಟಕ, ಸರ್ಕಾರಿ ಬಾಲಕರ ಪ.ಪೂ.ಕಾಲೇಜು ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿದ್ದ ಗಣ್ಯರು, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ತಾವರಗೇರಾ ಪಟ್ಟಣದ ದತ್ತಿ ದಾನಿಗಳಾದ ದಿ. ಶ್ರೀಧರಪ್ಪ ತಾಳಿಕೋಟಿ, ದಿ.ನೀಲಮ್ಮ ಮಲಕಾಜಪ್ಪ ದಂಡಿನ ಅವರ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ನಿವೃತ್ತ ಮುಖ್ಯ ಶಿಕ್ಷಕ ಹಂಪಣ್ಣ ಗುಡದೂರ, ಕುಷ್ಟಗಿಯ ಸಾಹಿತಿ ರವೀಂದ್ರ ಬಾಕಳೆ, ಟಿ.ಸಿ.ಎಚ್. ಕಾಲೇಜಿನ ಪ್ರಾಚಾರ್ಯ ರಂಗನಾಥ ಅಂಬಿಗೇರ, ಪ.ಪಂ.ಸದಸ್ಯೆ ಬೇಬಿರೇಖಾ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಕೆ.ಹೆಚ್.ಹುಲಿ, ಶಿಕ್ಷಕ ಸಂಗಪ್ಪ ಗುಡದೂರ, ಕಾಲೇಜಿನ ಉಪನ್ಯಾಸಕ ವಿ.ಎನ್. ಪಾಟೀಲ, ಭಾವಿಕಟ್ಟಿ, ಮಲ್ಲಮ್ಮ ಪಾಟೀಲ,ಚೌಧರಿ, ಪರಶುರಾಮ ಬಂಡಿ, ಭೀಮನಗೌಡ ಪಾಟೀಲ ತೆಮ್ಮಿನಾಳ ಹೋಬಳಿ ಕಸಾಪ ಅಧ್ಯಕ್ಷ ರವೀಂದ್ರ ಬಳಿಗಾರ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.