ADVERTISEMENT

ಮುನಿರಾಬಾದ್: ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:01 IST
Last Updated 27 ಜನವರಿ 2026, 7:01 IST
ಮುನಿರಾಬಾದ್ ಸಮೀಪ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಮುನಿರಾಬಾದ್ ಸಮೀಪ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ಮುನಿರಾಬಾದ್: ಸಮೀಪದ ಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಿತು.

ಪಿಡಿಒ ವೀರೇಶ್ ಮಾತನಾಡಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಹಕ್ಕುಗಳ ಜೊತೆ ಕರ್ತವ್ಯಗಳನ್ನು ಕೂಡ ನಿಭಾಯಿಸುವುದು ಕಡ್ಡಾಯ ಎಂದರು.

ಗ್ರಾಪಂ ಸದಸ್ಯ ಖಾಜಾವಲಿ ಕಿನ್ನಾಳ ಮಾತನಾಡಿ, ಜಾತಿ, ಮತ, ಪಂಥ ಯಾವುದೇ ಇರಲಿ ಸಂವಿಧಾನ ಮಾತ್ರ ಒಂದೇ. ಎಲ್ಲರಿಗೂ ಸಂವಿಧಾನ ಸ್ವಾತಂತ್ರ್ಯದ ಹಕ್ಕು ನೀಡಿದೆ ಎಂದರು.

ADVERTISEMENT

ಗ್ರಾಪಂ ಅಧ್ಯಕ್ಷ ಸುರೇಶ ಚಲವಾದಿ, ಸದಸ್ಯ ಮಹಮ್ಮದ್ ಅಜೀಂ, ಕೃಷ್ಣ ಕುಮಾರ, ಹನುಮಂತಪ್ಪ ಮೆಟ್ಟಿನ್, ನಿಂಗನಗೌಡ ಬೇವೂರು, ಅಲ್ಲಾಭಕ್ಷಿ, ವಸಂತ ನಾಯಕ್ ಸೇರಿದಂತೆ ಅನೇಕರಿದ್ದರು. 

ನಿಯಮಿತವಾಗಿ ಗ್ರಂಥಾಲಯ ಬಳಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.