ADVERTISEMENT

ಪರಿವರ್ತನೆಯ ಸಂಕಲ್ಪ ಮಾಡಿ: ಯೋಗಿನಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:34 IST
Last Updated 3 ಜನವರಿ 2026, 6:34 IST
ಕೊಪ್ಪಳದ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವತಿಯಿಂದ ಹೊಸವರ್ಷವನ್ನು ಆಚರಿಸಲಾಯಿತು
ಕೊಪ್ಪಳದ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವತಿಯಿಂದ ಹೊಸವರ್ಷವನ್ನು ಆಚರಿಸಲಾಯಿತು   

ಕೊಪ್ಪಳ: ‘ಹೊಸ ವರುಷದಲ್ಲಿ ನಿತ್ಯವೂ ಹರುಷವನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ಹೊಸ ಉತ್ಸಾಹದಿಂದ ಸಂಕಲ್ಪ ಮಾಡಿಕೊಂಡು ಮುನ್ನುಗ್ಗಿದರೆ ಜೀವನ ಪರಿವರ್ತನೆಯಾಗುತ್ತದೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಯೋಗಿನಿ ಹೇಳಿದರು.

ಜಿಲ್ಲಾ ಕಾರಾಗೃಹದಲ್ಲಿ ಹೊಸವರ್ಷದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ‘ಹಳೆಯ ವರ್ಷದಲ್ಲಿ ಆದ ತಪ್ಪಿನ ಅರಿವು ಮಾಡಿಕೊಂಡು ಆ ತಪ್ಪು ಹೊಸ ವರ್ಷದಲ್ಲಿ ಪುನಃ ಆಗದಂತೆ ಎಚ್ಚರವಹಿಸಿಕೊಳ್ಳಬೇಕು. ಹೊಸ ವರ್ಷದಲ್ಲಿ ದಿನಕ್ಕೆ ಒಮ್ಮೆಯಾದರೂ ಶ್ರೇಷ್ಠ ಆಧ್ಯಾತ್ಮ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು’ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಅಮರೇಶ ಪೂಜಾರ ಮಾತನಾಡಿ ‘ಜೀವನವನ್ನು ಪರಿವರ್ತನೆ ಮಾಡಿಕೊಳ್ಳಲು ಆಧ್ಯಾತ್ಮ ಚಿಂತನೆ ಅತ್ಯಗತ್ಯ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು. ವೇದಿಕೆ ಮೇಲೆ ಬಿ.ಕೆ. ಸ್ನೇಹಾ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.