ADVERTISEMENT

ಹೋಬಳಿ ಕೇಂದ್ರದ ಅಭಿವೃದ್ಧಿಗೆ ಒತ್ತು: ಶಾಸಕ ಹಿಟ್ನಾಳ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 4:37 IST
Last Updated 27 ಜೂನ್ 2022, 4:37 IST
ಅಳವಂಡಿ ಸಮೀಪದ ಬೈರಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು
ಅಳವಂಡಿ ಸಮೀಪದ ಬೈರಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು   

ಅಳವಂಡಿ: ‘ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಸಮೀಪದ ಬೈರಾಪುರ ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ₹1.82 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಬೈರಾಪುರ–ಅಳವಂಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಉದ್ಯೋಗ ಸೃಷ್ಟಿ ಭರವಸೆಯೂ ಈಡೇರಿ ಲ್ಲ. ಸಿದ್ದರಾಮಯ್ಯನವರ ಆಡಳಿತದಲ್ಲಿಜಾರಿಗೆತಂದಿರುವಯೋಜನೆಗಳನ್ನುನಿರ್ಲಕ್ಷ್ಯಿಸ ಲಾಗಿದೆ. ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ADVERTISEMENT

ಕೋವಿಡ್ ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ ಉತ್ತಮ ಸೇವೆ ನೀಡಿದೆ‌. ಇದಕ್ಕೆ ₹125 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಿದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಕಾರಣ. ಸದ್ಯ ₹145 ಲಕ್ಷ ವೆಚ್ಚದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಅಲೆದಾಟ ತಪ್ಪಲಿದೆ ಎಂದರು.

₹88 ಕೋಟಿ ವೆಚ್ಚದಲ್ಲಿ 8 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಹಾಗೂ ಅಳವಂಡಿ–ಬೇಟಗೇರಿ ಏತ ನೀರಾವರಿ ಯೋಜನೆ ಜಾರಿಯ ಮೂಲಕ ನೀರಾವರಿ ಗೆ ಆದ್ಯತೆ ನೀಡಲಾಗುತ್ತಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಿಂದೋಗಿ–ಮುಂಡರಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖರಾದ ವೆಂಕನಗೌಡ ಹಿರೇಗೌಡ್ರ, ತೋಟಪ್ಪ ಶಿಂಟ್ರ, ನಿಂಗಪ್ಪ ಆವೋಜಿ, ಭಾರತಿ ಬೆಣಕಲ್, ಶಂಕ್ರಮ್ಮ ಜೋಗಿನ್,
ಭರಮಪ್ಪ ನಗರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಅಡಿವೆಪ್ಪ ರಾಟಿ, ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ನಿಂಗಪ್ಪ ಮೇಟಿ, ಪರಶುರಾಮ ಮೆಕ್ಕಿ, ಭಿಮೇಶಪ್ಪ ಹವಳ್ಳನವರ, ಶಿವರೆಡ್ಢಿ, ಪ್ರಸನ್ನ ಗಡಾದ, ನವೋದಯ ವಿರುಪಾಕ್ಷಪ್ಪ, ಹನುಮೇಶ, ರವೀಂದ್ರ ಸಂಗರಡ್ಡಿ, ಮಲ್ಲಪ್ಪ ಬೆಣಕಲ್, ಸಲೀಂ ಅಳವಂಡಿ, ಅಕ್ಬರ್ ಪಲ್ಟನ್, ವಿರುಪಣ್ಣ, ಜ್ಯೋತಿ ಗೊಂಡಬಾಳ, ಅಜೀಂ ಅತ್ತಾರ, ತಾ.ಪಂ ಇಒ ಮಹೇಶ, ಉಪತಹಸೀಲ್ದಾರ್ ಶರಣಬಸವೇಶ ಕಳ್ಳಿಮಠ, ಪಿಡಿಒ ರುದ್ರಯ್ಯ, ಬಸವರೆಡ್ಡಿ, ಎಎಸ್ಐ ಚನ್ನಪ್ಪ ಹಾಗೂ ಆರ್‌ಐ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.