
ಗಂಗಾವತಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಶನಿವಾರ ಇಲ್ಲಿನ ವಿಜಯನಗರ ಕಾಲೊನಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಚ ಪರಿವರ್ತನ ಯೋಜನೆಯ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸಂಘದ ಪ್ರಮುಖ ಚಂದ್ರಶೇಖರ ಹಿರೇಮಠ, ಅನೀಲಕುಮಾರ ಅಳವಂಡಿಕರ್ ಮಾತನಾಡಿ, ‘2025ಕ್ಕೆ ಆರ್‌ಎಸ್‌ಎಸ್ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆ ವರ್ಷ ಪೂರ್ತಿ ಗೃಹ ಸಂಪರ್ಕ ಅಭಿಯಾನ ನಡೆಸಿ, ಪಂಚ ಪರಿವರ್ತನೆ ವಿಷಯ ತಿಳಿಸಲಾಗುತ್ತದೆ’ ಎಂದರು.
‘ಪಂಚ ಪರಿವರ್ತನೆಯಲ್ಲಿ ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರ ಪಾಲನೆ ಅಂಶಗಳು ಒಳಗೊಂಡಿವೆ’ ಎಂದು ತಿಳಿಸಿದರು.
ಅಭಿಯಾನದಲ್ಲಿ ಸಂಘದ ಸದಸ್ಯ ಶರಬೇಂದ್ರ, ತಂಜಾವೂರು ಅಕ್ಷಯ್, ಜಡಿಯಪ್ಪ, ರವೀಂದ್ರ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.