ಕೊಪ್ಪಳ: ವಿಜಯದಶಮಿ ಉತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಶನಿವಾರ ನಗರದಲ್ಲಿ ಪಥ ಸಂಚಲನ ನಡೆಸಿದರು. ಸ್ಥಳೀಯರು ಮಾರ್ಗದುದ್ದಕ್ಕೂ ಹೂವಿನ ಮಳೆಗೆರೆದು ಸ್ವಾಗತಿಸಿದರು.
ಇಲ್ಲಿನ ಶಾರದಾ ಚಿತ್ರಮಂದಿರ ಭಾಗದ ಮೈದಾನದಿಂದ ಆರಂಭವಾದ ಪಥ ಸಂಚಲನ ಗಡಿಯಾರ ಕಂಬ, ಕೋಟೆ ಗಣೇಶ ಗುಡಿ, ಛತ್ರಪತಿ ಶಿವಾಜಿ ವೃತ್ತ, ಟಾಂಗಾ ಕೂಟ, ಜವಾಹರ ರಸ್ತೆ ಮಾರ್ಗವಾಗಿ ಅಶೋಕ ವೃತ್ತ ದುರ್ಗಮ್ಮ ಕಟ್ಟೆ ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಟಾಂಗಾ ಕೂಟ ಹಾಗೂ ಗಡಿಯಾರ ಕಂಬದಿಂದ ಮರಳಿ ಚಿತ್ರಮಂದಿರ ಭಾಗದ ಮೈದಾನಕ್ಕೆ ಮರಳಿ ಬಂದಿತು.
ಪಥ ಸಂಚಲನ ಸಾಗಿ ಬಂದ ಈ ಮಾರ್ಗದಲ್ಲಿ ನೀರು ಹಾಕಿ ರಂಗೋಲಿ, ಪುಷ್ಪ ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಪಥ ಸಂಚಲನದ ಮುಂಭಾಗದಲ್ಲಿ ಸಾಗಿದ ವಾಹನದಲ್ಲಿ ಭಾರತಾಂಬೆಯ ಭಾವಚಿತ್ರ ಇರಿಸಲಾಗಿತ್ತು. ಸದಸ್ಯರು ಗಣ ವೇಷಧಾರಿಗಳಾಗಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.