ಕೊಪ್ಪಳ: ‘ದೇಶಭಕ್ತಿ ಎಂದು ಬಿಂಬಿಸಿಕೊಳ್ಳುವ ಆರ್‌ಎಸ್‌ಎಸ್ ತರಬೇತಿಯಿಂದಲೇ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಸರ್ಕಾರದ ಮಹಿಳಾ ಅಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ಆರ್‌ಎಸ್‌ಎಸ್ ಅನ್ನು ಹಿಂದೆ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಈಗಲೂ ಯಾಕೆ ಮಾಡಬಾರದು, ಕೋಮುಗಲಭೆ ಮಾಡುತ್ತಲೇ ಹೋದಾಗ ಕ್ರಮ ಕೈಗೊಂಡರೆ ತಪ್ಪೇನು. ಅಲ್ಲಿ ಮಹಿಳೆಯರಿಗೆ ಬೈಯುವ ತರಬೇತಿ ನೀಡಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.
ಸವಾಲು: ‘ನನ್ನ ಮೇಲೆ ಆಧಾರ ರಹಿತ ಹಾಗೂ ದುರುದ್ಧೇಶಪೂರ್ವಕವಾಗಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿರುವ ಪೂರ್ಣಾಂದ ಪುರಿ ಸ್ವಾಮೀಜಿ ಆಗಿರುವ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿಯವರು ಕಾವಿ ಕಳಚಿ ಮತ್ತೆ ಪೂರ್ವಾಶ್ರಮದ ರಾಜಕೀಯಕ್ಕೆ ವಾಪಸಾಗಲಿ. ಪವಿತ್ರ ಪೀಠದ ಮೇಲೆ ಕುಳಿತು ಬಿಜೆಪಿಯಲ್ಲಿ ರೂಢಿಯಾಗಿದ್ದ ಸುಳ್ಳಿನ ರಾಜಕಾರಣ ಮಾಡಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.