ಅಂಜನಾದ್ರಿ (ಗಂಗಾವತಿ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇಗುಲದ 575 ಮೆಟ್ಟಿಲುಗಳ ಮೇಲೆ ಧಾರವಾಡದ ಮೈಲಾರ ನಿಂಗಜ್ಜ ಸ್ವಾಮೀಜಿ ಶನಿವಾರ ಉರುಳು ಸೇವೆ ಮಾಡಿದರು.
ಭಕ್ತರ ನೆರವಿನಿಂದ ಉರುಳು ಸೇವೆ ಮಾಡಿಕೊಂಡು ಅಂಜನಾದ್ರಿ ಬೆಟ್ಟ ತಲುಪಿದ ನಿಂಗಜ್ಜ ಸ್ವಾಮೀಜಿ ಅವರು ಆಂಜನೇಯ ಸ್ವಾಮಿ ದರ್ಶನ ಪಡೆದರು.
ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ, ಅನ್ನಪೂರ್ಣ ಸಿಂಗ್ ಹಾಗೂ ಶ್ರೀನಿವಾಸರೆಡ್ಡಿ, ಹಾಗೂ ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.