ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿನ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ಬುಧವಾರ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಸಾಯಿಬಾಬಾ ನಾಮಸ್ಮರಣೆ, ಮಹಾಮಂಗಳಾರತಿ, ಮಹಾಸಂಕಲ್ಪ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ. ರಾಮಕೃಷ್ಣ, ಸುರೇಶ, ಪಂಪಾಪತಿ, ಚೆನ್ನಪ್ಪ, ರಾಚೋಟಯ್ಯ ಭಗವತಿ, ಗುರುರಾಜ, ಪ್ರಹ್ಲಾದ್, ರಾಮಚಂದ್ರ ಶೆಟ್ಟಿ, ಎಂ.ರಾಮಾಂ ಜನೇಯ, ಕನಕಮೂರ್ತಿ, ಗಾಳಿ ಶಿವಪ್ಪ, ಕಿರಣಕುಮಾರ ಅವರು ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.