ADVERTISEMENT

ಶ್ರಾವಣ ಸೋಮವಾರ: ದೇಗುಲಗಳಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:29 IST
Last Updated 19 ಆಗಸ್ಟ್ 2025, 6:29 IST

ಕೊಪ್ಪಳ: ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ನಗರದ ಈಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಗವಿಸಿದ್ಧೇಶ್ವರ ಮಠ, ಮಳೆಮಲ್ಲೇಶ್ವರ ದೇವಸ್ಥಾನ ಮತ್ತು ಎನ್‌ಜಿಒ ಕಾಲೊನಿಯ ಕಿನ್ನಾಳ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ ಹೀಗೆ ಅನೇಕ ಕಡೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ವಿಶೇಷ ಪೂಜೆ, ಗೋಧಿ ಹುಗ್ಗಿ, ಅನ್ನ ಪ್ರಸಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸ್ಥಳೀಯರಾದ ರಾಜಶೇಖರ ಪುರಾಣಿಕಮಠ, ರಾಘವೇಂದ್ರ ದೇಶಪಾಂಡೆ, ನಾಗರಾಜ ನಾಯಕ ಡೊಳ್ಳಿನ, ಬಸವರಾಜ ಸವಡಿ, ತೇಜಪ್ಪ ಖಾನಾಪುರ, ಬಸಯ್ಯ ಸಾಲಿಮಠ, ವಿಜಯ ದಿವಟರ್, ಕಿರಣ ನಾಯಕ, ಸಂಗಪ್ಪ ಹಾಲ್ಯಾಳ, ಮಂಜುನಾಥ ಡಂಬಳ, ಖಜಾಂಚಿ ಪಾಲಾಕ್ಷಪ್ಪ ನಾಯಕ ಹಾಗೂ ಅಧ್ಯಕ್ಷ ವೀರಣ್ಣ ಚಾಕಲಬ್ಬಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.