ADVERTISEMENT

ಭೈರಪ್ಪ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಲೇಖಕ: ಸಚಿವ ತಂಗಡಗಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 11:19 IST
Last Updated 24 ಸೆಪ್ಟೆಂಬರ್ 2025, 11:19 IST
   

ಕೊಪ್ಪಳ: ಕನ್ನಡದ ಸಾರಸ್ವತ ಲೋಕದ ದಿಗ್ಗಜ ಬರಹಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌. ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಕನ್ನಡ ಸಾಹಿತ್ಯಕ್ಕೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಕನ್ನಡದ ಅದ್ಭುತ ಲೇಖಕ, ಕಾದಂಬರಿಕಾರ ಭೈರಪ್ಪ ಅವರು ಸಾಹಿತ್ಯ ಲೋಕದ ದೊಡ್ಡ ಆಸ್ತಿಯಾಗಿದ್ದರು. ಭೈರಪ್ಪನವರ ನಿಧನದ ಕನ್ನಡದ ಸಾರಸ್ವತ ಲೋಕವನ್ನು ಬಡವಾಗಿಸಿದೆ. ಪ್ರಪಂಚದಾದ್ಯಂತ ದೊಡ್ಡ ಓದುಗ ಬಳಗ ಹೊಂದಿರುವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅದ್ಭುತವಾದದ್ದು’ ಎಂದಿದ್ದಾರೆ.

‘ಭಾರತದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಎಸ್.ಎಲ್. ಭೈರಪ್ಪ ಅವರು ಕನ್ನಡದ ಅತ್ಯಂತ ವಿಶಿಷ್ಟ ಬರಹಗಾರರು. ಯಾವುದೇ ಒಂದು ಪ್ರಕಾರಕ್ಕೆ ಸೀಮಿತರಾಗದೇ ಕಾದಂಬರಿಗಳು ತಮ್ಮ ಅನನ್ಯ ನಿರೂಪಣಾ ಶೈಲಿಯಿಂದ ದೇಶ ವಿದೇಶಗಳಲ್ಲಿ ಅಪಾರ ಜನಪ್ರೀತಿ ಗಳಿಸುವಂತೆ ಮಾಡಿದವರು. ಭೈರಪ್ಪನವರ ಕಾದಂಬರಿಗಳಲ್ಲಿ ಮಾನವೀಯತೆ, ಸಂವೇದನಾಶೀಲತೆ, ಸಮಾಜಮುಖಿ ಚಿಂತನೆಗಳಿದ್ದವು’ ಎಂದು ಸ್ಮರಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.