ADVERTISEMENT

ಉಳ್ಳವರು ಇಡಿ, ಇಲ್ಲದವರು ತೆಗೆದುಕೊಳ್ಳಿ!

ಕೊಪ್ಪಳದ ಹಮಾಲರ ಸರ್ಕಲ್‌ ಬಳಿ ಬಡವರಿಗಾಗಿ ‘ಕರುಣೆಯ ಗೋಡೆ’ ಮಳಿಗೆ ಆರಂಭ

ಅನಿಲ್ ಬಾಚನಹಳ್ಳಿ
Published 7 ನವೆಂಬರ್ 2019, 10:04 IST
Last Updated 7 ನವೆಂಬರ್ 2019, 10:04 IST
ಕೊಪ್ಪಳದ ಹಮಾಲರ ವೃತ್ತದ ಬಳಿಯ ಯೂರೋಪ್‌ ಟೈಲರ್‌ ಅಂಗಡಿ ಪಕ್ಕದಲ್ಲಿ ಆರಂಭಿಸಲಾದ ‘ಕುರುಣೆಯ ಗೋಡೆ’ ಎನ್ನುವ ಮಳಿಗೆ
ಕೊಪ್ಪಳದ ಹಮಾಲರ ವೃತ್ತದ ಬಳಿಯ ಯೂರೋಪ್‌ ಟೈಲರ್‌ ಅಂಗಡಿ ಪಕ್ಕದಲ್ಲಿ ಆರಂಭಿಸಲಾದ ‘ಕುರುಣೆಯ ಗೋಡೆ’ ಎನ್ನುವ ಮಳಿಗೆ   

ಕೊಪ್ಪಳ: ನಿಮಗೆ ಅಗತ್ಯವಿಲ್ಲದ್ದನ್ನು ಇಲ್ಲಿ ಇಡಿ, ಇಲ್ಲಿ ಇರುವುದರಲ್ಲಿ ಯಾವು ದಾದರೂ ನಿಮಗೆ ಅಗತ್ಯವಿದ್ದರೇ ತೆಗೆದುಕೊಳ್ಳಿ...

ಹಿಂಗೊಂದು ಟ್ಯಾಗ್‌ ಲೈನ್‌ ಮೂಲಕ ನಗರದ ಹಮಾಲರ ಸರ್ಕಲ್‌ ಬಳಿಯ ಯೂರೋಪ್‌ ಟೈಲರ್‌ ಅಂಗಡಿ ಪಕ್ಕದಲ್ಲಿ ‘ಕರುಣೆಯ ಗೋಡೆ’ ಎನ್ನುವ ಮಳಿಗೆ ಆರಂಭಿಸಲಾಗಿದೆ. ಮಹಾನಗರ ಬೆಂಗಳೂರು, ಬಳ್ಳಾರಿಯಲ್ಲಿ ಆರಂಭ ಗೊಂಡ ಮಳಿಗೆಯಿಂದ ಸ್ಫೂರ್ತಿಗೊಂಡ ಯುವಕನೊಬ್ಬ ಈ ಮಳಿಗೆ ಆರಂಭಿಸಿದ್ದಾನೆ.

ಈ ಮಳಿಗೆ ವಿಶೇಷವೆಂದರೆ ಬೇಡದ, ಬಳಸಿದ, ಹೆಚ್ಚಾದ ವಸ್ತುಗಳನ್ನು ಇಲ್ಲಿ ಇಟ್ಟರೆ ಅಗತ್ಯ ಇರುವ ಬಡವರು ತೆಗೆದುಕೊಂಡು ಹೋಗಲಿ ಎಂಬ ಸದುದ್ದೇಶದಿಂದ ಆರಂಭಿಸಲಾಗಿದೆ.

ADVERTISEMENT

ಬಡತನ ಇರುವವರೆಗೂ ಬಡವರು ಇರುತ್ತಾರೆ. ಬಡತನವನ್ನು ಹೋಗ ಲಾಡಿಸಬೇಕು ಎಂಬ ಸದುದ್ದೇಶದಿಂದ ಇಂತಹ ಯೋಜನೆ ಮಾಡಲಾಗಿದ್ದು, ಯೂರೋಪ್‌ ಟೈಲರ್‌ ಅಂಗಡಿ ಮಾಲೀಕ ಆಯೂಬ್‌ ಮತ್ತು ಡಾ.ಆನಂದ ಹಾಗೂ ಗೆಳೆಯರು ಸೇರಿಕೊಂಡು ₹ 20 ಸಾವಿರ ವೆಚ್ಚದಲ್ಲಿ ‘ಕರುಣೆಯ ಗೋಡೆ’ಯನ್ನು ಸ್ಥಾಪಿಸಿದ್ದಾರೆ. ಶ್ರಮಿಕ, ಬಡವರ ಅಗತ್ಯ ಮನಗಂಡು ಸದ್ದಿಲ್ಲದೆಜನ ಸೇವೆಗೆ ಮುಂದಾಗಿದ್ದು, ಪ್ರಶಂಸೆ ವ್ಯಕ್ತವಾ ಗಿದೆ.'ಇದಕ್ಕೆ ನಾಗರಿಕರ ಸಹಕಾರ ಮತ್ತು ಕರುಣೆಯ ಮೂಲಕ ಪ್ರೋತ್ಸಾಹಿಸ ಬೇಕಾದ ಅವಶ್ಯಕತೆ ಇದೆ' ಎನ್ನುತ್ತಾರೆ ಅದರ ಮಾಲೀಕರು.

ಈ ‘ಕುರುಣೆಯ ಗೋಡೆ’ ಎಂಬ ಅಲೆಮಾರಿನಲ್ಲಿ ಎಂಟು ವಿಭಾಗ ಮಾಡಲಾಗಿದೆ. ಇದರಲ್ಲಿ ಮನೆಯಲ್ಲಿ ಉಪಯೋಗವಿಲ್ಲದ ವಸ್ತುಗಳು, ಆಟಿಕೆ ಸಾಮಗ್ರಿಗಳು, ಮಹಿಳೆ, ಮಕ್ಕಳ, ಪುರುಷರ ಬಟ್ಟೆಗಳು, ಪಾತ್ರೆಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಿಕಲ್‌ ಸಾಮಾಗ್ರಿಗಳನ್ನು ಇಡಬಹುದಾಗಿದೆ. ಕರುಣೆಯ ಗೋಡೆಯಲ್ಲಿರುವ ವಸ್ತುಗಳು, ಸಾಮಾಗ್ರಿಗಳು, ಬಟ್ಟೆಗಳು ಯಾರಿಗೆ ಅವಶ್ಯಕತೆ ಇದೆಯೋ ಅವರು ತೆಗೆದುಕೊಳ್ಳಬಹುದು.

'ಜಾತಿ, ಧರ್ಮ ಬೇಧವಿಲ್ಲದಈ ಕಾರ್ಯಕ್ಕೆ ಉತ್ತಮ ಜನಸ್ಪಂದನೆ ದೊರೆತಿದ್ದು, ಬಟ್ಟೆ ಮತ್ತು ಚಪ್ಪಲಿ, ಎಲೆಕ್ಟ್ರಿಕಲ್‌ ಸಾಮಗ್ರಿಗಳು ಸೇರಿದಂತೆ ಆಹಾರವನ್ನು ತಂದು ನಾಗರಿಕರು ಇಡುತ್ತಿದ್ದಾರೆ. ಅವಶ್ಯಕತೆ ಇರುವವರು ಇದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಬಡವರು, ನಿರ್ಗತಿಕರು, ಅನಾಥರಿಗೆ ಅನುಕೂಲ ಆಗಲಿದೆ. ಬಡತನ ನಿರ್ಮೂಲನೆಗೆ ಇದೂ ಒಂದು ಮಾರ್ಗವಾಗಿದೆ' ಎನ್ನುತ್ತಾರೆ ಆಯೂಬ್‌.

ಹಿರಿಯ ನಾಗರಿಕರೊಬ್ಬರು ಪ್ರತಿ ದಿನ ಒಂದು ಪ್ಲೇಟ್ ಇಡ್ಲಿಯನ್ನು ಇಟ್ಟು ಹೋಗುತ್ತಾರೆ. ಈಚೆಗೆ ಹಳೆಯ ಟಿವಿಯ ಎರಡು ಸೆಟ್‌ಗಳನ್ನು ಇಟ್ಟು ಹೋಗಿದ್ದರು. ಬಟ್ಟೆ, ಪಾದರಕ್ಷೆ ಮುಂತಾದ ವಸ್ತುಗಳನ್ನು ಇಟ್ಟಿದ್ದಾರೆ. ನಿರ್ಗತಿಕರು, ಬಡವರು ತೆಗೆದುಕೊಂಡು ಹೋಗುವಂತೆ ಮಾಹಿತಿ ನೀಡಲಾಗುತ್ತದೆ. ಈ ಕರುಣೆಯ ಗೋಡೆಯ ಕಾರ್ಯ ತನ್ನ ಉದ್ದೇಶ ಸಾಧನೆಗೆ ಸಹಾಯಕವಾಗುವಂತೆ ಹೆಚ್ಚಿನ ಯೋಜನೆಯನ್ನು ರೂಪಿಸಲಾಗುತ್ತದೆ.

ದಾರಿಹೋಕರು ಕೂಡಾ ಕುತೂಹಲದಿಂದ ವೀಕ್ಷಿಸಿ, ತಮ್ಮಲ್ಲಿರುವ ವಸ್ತುಗಳನ್ನು ಹಾಕಿ ಹೋಗುತ್ತಿರುವುದು ಉತ್ತಮ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.