ADVERTISEMENT

‘ಶ್ರೀನಿವಾಸ್ ರಾಮಾನುಜನ್‌ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:45 IST
Last Updated 23 ಡಿಸೆಂಬರ್ 2025, 4:45 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು   

ಅಳವಂಡಿ: ‘ಶ್ರೀನಿವಾಸ್ ರಾಮಾನುಜನ್ ಒಬ್ಬ ಶ್ರೇಷ್ಠ ಗಣಿತಜ್ಞ, ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡಿದ್ದಾರೆ. ಗಣಿತಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದು ಗಣಿತ ಶಿಕ್ಷಕ ಮರ್ದಾನಲಿ ಗಡಾದ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮ ದಿನದ ನಿಮಿತ್ತ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಶಿಕ್ಷಕ ರವಿಕಿರಣ್ ಟಿಕಾರೆ ಮಾತನಾಡಿ, ‘ಗಣಿತದ ಮಹತ್ವ, ರಾಮಾನುಜನ್ ಅವರ ಜೀವನ, ಸಾಧನೆ, ತಿಳಿಸುವ ಸಲುವಾಗಿ ಪ್ರತಿವರ್ಷ ಡಿ.22 ರಂದು ರಾಮಾನುಜನ್ ಅವರ ಜನ್ಮದಿನವನ್ನು ರಾಷ್ಟೀಯ ಗಣಿತ ದಿನ ಆಚರಿಸಲಾಗುತ್ತದೆ’ ಎಂದರು.

ADVERTISEMENT

ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ‘ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ ಸತತ ಪರಿಶ್ರಮ ಹಾಗೂ ಅಭ್ಯಾಸದಿಂದ ಉತ್ತಮ ಅಂಕ ಗಳಿಸಲು ಸಾಧ್ಯ’ ಎಂದರು.

ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಗಣಿತದ ಹನಿಗವನ ಗಳನ್ನು ವಾಚಿಸಿದರು.

ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.‌

ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರಾಜಾಸಾಬ್ ಬಳಿಗಾರ, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ನಾರಾಯಣಪ್ಪ ಬಿಸನಳ್ಳಿ, ಶಾಂತವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ, ಶ್ವೇತಾ ಹುಲ್ಲೂರ, ಪರಶುರಾಮ್ ಯಡವಟ್ಟಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.