ADVERTISEMENT

ಆತಂಕವಿಲ್ಲದೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:03 IST
Last Updated 20 ಜುಲೈ 2021, 4:03 IST
ಕನಕಗಿರಿಯ ಆದರ್ಶ ವಿದ್ಯಾಲಯದಲ್ಲಿ ಹೊಸದಾಗಿ ತೆರೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕನಕಗಿರಿಯ ಆದರ್ಶ ವಿದ್ಯಾಲಯದಲ್ಲಿ ಹೊಸದಾಗಿ ತೆರೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಕನಕಗಿರಿ: ಇಲ್ಲಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ಹೊಸದಾಗಿ ಆದರ್ಶ ವಿದ್ಯಾಲಯದಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ 189 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಗೈರಾಗಿದ್ದರು.

ಗ್ರೇಡ್-2 ತಹಶೀಲ್ದಾರ್ ಹಾಗೂ ಪರೀಕ್ಷಾ ಕೇಂದ್ರದ ವೀಕ್ಷಕ ಮಹಾಂತಗೌಡ, ಮುಖ್ಯ ಅಧೀಕ್ಷಕ ಶಿವಕುಮಾರ, ಸ್ಥಾನಿಕ ಜಾಗೃತ ದಳದ ಅಧಿಕಾರಿ ಶಿವಾನಂದ ತಿಮ್ಮಾಪುರ, ಪ್ರಶ್ನೆ ಪತ್ರಿಕೆ ಪಾಲಕ ಮೌನೇಶ ಬಡಿಗೇರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಚವ್ಹಾಣ ಇದ್ದರು.

ADVERTISEMENT

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 298 ವಿದ್ಯಾರ್ಥಿಗಳ ಪೈಕಿ 2 ವಿದ್ಯಾರ್ಥಿಗಳು ಗೈರು ಹಾಜರಿಯಾದರೆ, ಇದೇ ಕಾಲೇಜಿನಲ್ಲಿ ತೆರೆದ ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ 293 ವಿದ್ಯಾರ್ಥಿಗಳ ಪೈಕಿ 288 ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಮುಖ್ಯ ಅಧೀಕ್ಷಕರಾದ ಜಗದೀಶ ಹಾದಿಮನಿ, ಶೇಖರಪ್ಪ ತಿಳಿಸಿದರು.

ರುದ್ರಸ್ವಾಮಿ ಅನುದಾನಿತ ಪ್ರೌಢಶಾಲೆಯಲ್ಲಿ ಗಣಿತ ಕೋರ್ ವಿಷಯಕ್ಕೆ 233, ವಿಜ್ಞಾನಕ್ಕೆ 225 ಹಾಗೂ ಸಮಾಜ ವಿಜ್ಞಾನಕ್ಕೆ 223 ವಿದ್ಯಾರ್ಥಿಗಳು ಹಾಜರಾಗಿದ್ದು, ವಿಜ್ಞಾನ ವಿಷಯಕ್ಕೆ ಮಾತ್ರ ಒಬ್ಬ ವಿದ್ಯಾರ್ಥಿನಿ ಗೈರು ಹಾಜರಿಯಾಗಿದ್ದರು ಎಂದು ಮುಖ್ಯ ಅಧೀಕ್ಷಕ ಚಂದುಸಾಬ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.