ADVERTISEMENT

SSLC Result 2025 | ಕೊಪ್ಪಳ ಜಿಲ್ಲೆ: ಎರಡು ಸ್ಥಾನವಷ್ಟೇ ಜಿಗಿತ

​ಪ್ರಜಾವಾಣಿ ವಾರ್ತೆ
Published 2 ಮೇ 2025, 7:20 IST
Last Updated 2 ಮೇ 2025, 7:20 IST
   

ಕೊಪ್ಪಳ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ‌ ಕೊಪ್ಪಳ ಜಿಲ್ಲೆ ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಸ್ಥಾನ ಮೇಲಕ್ಕೇರಿದೆ.

ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಕೊಪ್ಪಳ ‌ಜಿಲ್ಲೆ ಈ ಬಾರಿ ರಾಜ್ಯಮಟ್ಟದಲ್ಲಿ 30 ಸ್ಥಾನ ಗಳಿಸಿದೆ. ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನಾನಾ ಯೋಜನೆಗಳನ್ನು ರೂಪಿಸಿದ್ದವು. ಶಿಕ್ಷಕರು ಪಾಸಿಂಗ್ ಪ್ಯಾಕೇಜ್ ಯೋಜನೆ ರೂಪಿಸಿದ್ದರೂ ದೊಡ್ಡ ಮಟ್ಟದಲ್ಲಿ ಫಲಿತಾಂಶ ಸುಧಾರಣೆ ಕಂಡಿಲ್ಲ. ಎರಡು ವರ್ಷಗಳ ಹಿಂದೆ ಕೊಪ್ಪಳ ‌ಜಿಲ್ಲೆ ರಾಜ್ಯದಲ್ಲಿ 16ನೇ ಸ್ಥಾನ ಹಾಗೂ ಕಲ್ಯಾಣ ‌ಕರ್ನಾಟಕ ಭಾಗದಲ್ಲಿ ಅಗ್ರಸ್ಥಾನ ಗಳಿಸಿತ್ತು. ಹಿಂದಿನ ಎರಡು ವರ್ಷಗಳಿಂದ ಫಲಿತಾಂಶ ಕುಸಿತದ ಹಾದಿಯಲ್ಲಿ ಸಾಗಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 21610 ವಿದ್ಯಾರ್ಥಿಗಳಲ್ಲಿ 12386 ಮಕ್ಕಳು ಉತ್ತೀರ್ಣರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.