
ತಾವರಗೇರಾ: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎಪಿಎಂಸಿ ಆವರಣದಲ್ಲಿ ಸೋಮವಾರ 1.5 ಟನ್ ತೂಕದ ಕಲ್ಲು ಎಳೆಯುವ ಸ್ಫರ್ಧೆ ನಡೆಯಿತು.
ಸ್ಥಳೀಯ ಎಪಿಎಂಸಿ ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಆಶ್ರಯದಲ್ಲಿ ನಡೆದ ಸ್ಪರ್ಧೆಯನ್ನು ಗುಡದೂರು ಮಠದ ಗುರಯ್ಯ ತಾತನವರು, ತಾವರಗೇರಾ ಸಿದ್ಧರೂಡ ಕುಮಾರ ಸಿದ್ಧರೂಡ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ನವಲಕಲ್ ಗ್ರಾಮದ ಹನಮಂತಪ್ಪ ಅವರ ಕಿಚ್ಚ ಬಾಯ್ಸ್ ಹೆಸರಿನ ಎತ್ತಿನ ಜೋಡಿ ಪ್ರಥಮ ಸ್ಥಾನ. ಕುರುಕುಂದ ಅಮರೇಶಪ್ಪ ಎತ್ತಿನ ಜೋಡಿ ದ್ವಿತೀಯ, ಮಂಜಲಾಪೂರ ಮಾರುತಿ ಎತ್ತಿನ ಜೋಡಿ ತೃತಿಯ ಬಹುಮಾನ ಪಡೆದವು.
ವಿಜೇತ ಎತ್ತಿನ ಜೋಡಿಗಳಿಗೆ ಪ್ರಥಮ ಬಹುಮಾನ ಸ್ಕೂಟಿ ಮತ್ತು ದ್ವೀತಿಯ ಬಹುಮಾನ ₹15 ಸಾವಿರ ಮತ್ತು ತೃತೀಯ ಬಹುಮಾನ ₹11 ಸಾವಿರ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತ್ವಾಡ, ಶ್ಯಾಮೀದಸಾಬ ನಾಲಬಂದ, ಆದಪ್ಪ ನಾಲತ್ವಾಡ, ಅಮರೇಶ ನಾಲತ್ವಾಡ, ಕರಡೆಪ್ಪ ನಾಲತ್ವಾಡ, ದೊಡ್ಡನಗೌಡ ಸರನಾಡಗೌಡರ, ವಿರುಪಣ್ಣ ನಾಲತ್ವಾಡ , ಮಾನಪ್ಪ ಮದ್ದಿನ್, ಶೇಖರಪ್ಪ ಗುಬ್ಬಿ, ನಿಂಗಪ್ಪ ಬಡಿಗೇರ, ಈರಣ್ಣ ಲಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.