ADVERTISEMENT

ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮ

ಅಧಿಕಾರಿಗಳಿಗೆ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:34 IST
Last Updated 14 ಮಾರ್ಚ್ 2023, 4:34 IST
ಕುಷ್ಟಗಿಯಲ್ಲಿ ನಡೆದ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಕುರಿತ ಸಭೆಯಲ್ಲಿ ವಿಜಯಕುಮಾರ ಮಾಹಿತಿ ನೀಡಿದರು
ಕುಷ್ಟಗಿಯಲ್ಲಿ ನಡೆದ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಕುರಿತ ಸಭೆಯಲ್ಲಿ ವಿಜಯಕುಮಾರ ಮಾಹಿತಿ ನೀಡಿದರು   

ಕುಷ್ಟಗಿ: ‘ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳಲಿದ್ದು, ಸಂಬಂಧಿಸಿದ ತಂಡಗಳಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಅವರು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ನೀತಿ ಸಂಹಿತೆ ಸಂಬಂಧ ರಚಿಸಲಾ ಗಿರುವ ವಿವಿಧ ತಂಡಗಳ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಪೂರ್ವಸಿದ್ಧತಾ ಸಭೆಯಲ್ಲಿ ಸೂಚನೆ ನೀಡಿದ ಅವರು,‘ಚುನಾವಣಾ ಆ ಯೋಗ ನೀಡುವ ಮಾರ್ಗ ದರ್ಶನವನ್ನು ಚಾಚೂ ತಪ್ಪದೆ ಪಾಲಿಸಬೇಕು’ ಎಂದರು.

ಪ್ರತಿಯೊಂದು ತಂಡ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಪ್ರತಿಯೊ ಬ್ಬರೂ ಸರಿಯಾದ ಸಮಯದಲ್ಲಿ ಸರಿಯಾದ‌ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕಬಾರದು. ಚುನಾವಣೆ ಮುಕ್ತಾಯವಾಗುವವರೆಗೆ ಹಗಲು–ರಾತ್ರಿ ಕಾರ್ಯನಿರ್ವಹಿಸಲು ಕೆಳಹಂತದಿಂದ ಮೇಲಿನ ಹಂತದ ಎಲ್ಲರೂ‌ ಸಿದ್ಧರಾಗಿರಬೇಕು. ಅಗತ್ಯ ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುತ್ತಿದ್ದು, ವಾಹನಗಳನ್ನು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಸಮರ್ಪಕ ರೀತಿಯಲ್ಲಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. ಹಿರೇವಂಕಲಕುಂಟಾದ ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರು ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಪಾಲನೆ, ಕೆಲ ಸಂದರ್ಭಗಳಲ್ಲಿ ಎದುರಾ ಗಬಹುದಾದ ಸಮಸ್ಯೆಗಳ ಪರಿಹಾರದ ಕುರಿತು ಮಾಹಿತಿ ನೀಡಿದರು.

ADVERTISEMENT

ಮಾದರಿ ನೀತಿ ಸಂಹಿತೆ ತಾಲ್ಲೂಕಿನ ನೋಡಲ್ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಶಿವಪ್ಪ‌ ಸುಬೇದಾರ್, ಅಜಿತ್, ಸುಂದರರಾಜ್‌, ಶರಣಪ್ಪ ಹುಡೇದ, ದೇವರಾಜ ಪತ್ತಾರ, ಸಂಗಪ್ಪ ನಂದಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.