ಯಲಬುರ್ಗಾ: ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಮೆಹಬೂಬ ಸುಬಾನಿಯವರ ಗ್ಯಾರವಿ ಕಾರ್ಯಕ್ರಮ ನಡೆಯಿತು.
ಇಸ್ಲಾ ಧರ್ಮ ಗುರು ರಶೀದ್ ಅಹ್ಮದ್ ಖಾಜಿ ಮಾತನಾಡಿ,‘ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯುವಕರು, ಹಿರಿಯರು ವಿವಿಧ ಧರ್ಮೀಯರು ಒಗ್ಗೂಡಿ ವಿವಿಧ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಸೌಹಾರ್ದದಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ಕಟ್ಟಿಕೊಂಡರೆ ಅದೊಂದು ಮಾದರಿ ಸಮುದಾಯದ ನೆಲೆಯಾಗಿ ಕಾಣಿಸಿಕೊಳ್ಳುತ್ತದೆ’ ಎಂದು ಹೇಳಿದರು.
ಸೈಯದ್ ಖಲಂದರ್ ಹುಸೇನಿ ಮಾತನಾಡಿದರು.
ಮಸೀದಿಯಲ್ಲಿ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಹಿಂದೂ ಹಾಗೂ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸಿದರು.
ಗಣ್ಯರಾದ ರಾಜಾಸಾಬ್ ಹಿರೇಮನಿ, ಪ್ರಭುದೇವ ಮೇಟಿ, ಗ್ಯಾನಪ್ಪ ಮೇಟಿ, ಮಹಿಬೂಬಸಾಬ್, ಶ್ಯಾಮಿದಸಾಬ್, ನಾಗರಾಜ ಮೇಟಿ, ನಾಗೇಶಪ್ಪ ಹಟ್ಟಿ, ಯಮನೂರಪ್ಪ ದೀಪಾಲಿ, ತಿಮ್ಮೆಗೌಡ ಪೊಲೀಸ್ ಪಾಟೀಲ, ಮಲ್ಲೇಶಯ್ಯ ಕಡಬಲಕಟ್ಟಿ, ಹುಸೇನಸಾಬ ಗಿರಣಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.