
ತಾವರಗೇರಾ: ಸಮೀಪದ ಎಂ ಗುಡದೂರು ಗ್ರಾಮದ ದೊಡ್ಡಬಸವೇಶ್ವರ ಜಾತ್ರೆ ಪ್ರಯುಕ್ತ ಮಂಗಳವಾರ ಸಂಜೆ ಸಕಲ ಭಕ್ತರಿಂದ ಭಕ್ತಿಯ ಮಹಾರಥೋತ್ಸವ ಜರುಗಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಮತ್ತು ಭಕ್ತರ ಭಜನಾ ಪದಗಳು, ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಿಂದ ಶಿವಲಿಂಗ ಪ್ರದರ್ಶನ, ಅಯ್ಯಾಚಾರ ಧೀಕ್ಷೆ ಮತ್ತು ವಸ್ತು ಪ್ರದರ್ಶನ ನಡೆಯಿತು.
ಎಂ ಗುಡದೂರು ನೀಲಕಂಠಯ್ಯ ತಾತನವರ ಸಾನಿಧ್ಯದಲ್ಲಿ, ಸಜ್ಜಲಗುಡ್ಡದ ಶ್ರೀಗುರು ದೊಡ್ಡಬಸವಾರ್ಯ ತಾತ, ಕುಷ್ಟಗಿ ಕರಿಬಸವ ಶಿವಾಚಾರ್ಯರು, ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವರಾಧ್ಯ ಸ್ವಾಮೀಜಿ, ಚಳಿಗೇರಿ ವೀರಸಂಗಮೇಶ್ವರ ಸ್ವಾಮೀಜಿ, ಮಂಗಳೂರು ಸಿದ್ಧದ್ದಲಿಂಗ ಶಿವಾಚಾರ್ಯರು, ದೋಟಿಹಾಳ ಚಂದ್ರಶೇಖರದೇವರು , ಸಂತೆಕೆಲ್ಲೂರು ಮಹಾಂತ ಶಿವಾಚಾರ್ಯರು, ವಿವಿಧ ಮಠಾಧೀಶರು ಆಗಮಿಸಿದ್ದರು.
ಶಾಸಕ ಹಾಗೂ ವಿಧಾನಸಭೆ ವಿಪಕ್ಷ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಮುದ್ದೇಬಿಹಾಳ ಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಮಹೇಶ, ಅಶೋಕ ಬಳೂಟಗಿ, ವಿವಿಧ ರಾಜಕೀಯ ನಾಯಕರು ಮತ್ತು ಸ್ಥಳಿಯ ಜನಪ್ರತಿನಿಧಿಗಳು, ಸುತ್ತ ಮುತ್ತಲಿನ ಗ್ರಾಮಗಳು, ಹೊರ ರಾಜ್ಯದ ಭಕ್ತರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.