
ತಾವರಗೇರಾ: ‘ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆ ಹುಟ್ಟಿಹಾಕಿ ಸಮಾಜಮುಖಿ ಕಾರ್ಯದ ಜತೆ ಜಂಜಾಟದ ನಡುವೆ ಸಾಧಕಿಯರ ಜೀವನ ಆಧಾರಿತ ಲೇಖನ, ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಓದುಗರಿಗೆ ನೀಡುವ ಉಪನ್ಯಾಸಕ ಹಾಗೂ ಲೇಖಕ ಶಿವನಗೌಡ ಪೊಲೀಸ್‌ಪಾಟೀಲ ಕಾರ್ಯ ಶ್ಲಾಘನೀಯ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸಮೀಪದ ನವಲಹಳ್ಳಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪತಿಷತ್ತು ತಾಲ್ಲೂಕು ಘಟಕ ಮತ್ತು ಚನ್ನಬಸನಗೌಡ ಪೊಲೀಸ್‌ಪಾಟೀಲ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ಛಲ ಬಿಡದ ಸಾಧಕಿಯರು’ ಪುಸ್ತಕ ಬಿಡುಗಡೆಯ ಕಾರ್ಯುಕ್ರಮ ಉದ್ಘಾಟಿಸಿ ಅವರು ಮಾತನಾಡಿರು.
ವಕೀಲ ಅಮರೇಗೌಡ ಪಾಟೀಲ ಮಾತನಾಡಿ, ‘ಗ್ರಾಮೀಣ ಪ್ರದೇಶದ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಈ ಸಂಸ್ಥೆ ಸಾಮಾಜಿಕ ಕಾರ್ಯಗಳ ಜತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆ ಮಾಡಿರುವದು ಸಂತೋಷ’ ಎಂದರು.
ವೇದಿಕೆಯಲ್ಲಿ ಉಪನ್ಯಾಸಕ ಹಾಗೂ ಲೇಖಕ ಶಿವನಗೌಡ ಪೊಲೀಸ್‌ಪಾಟೀಲ ಬರೆದಿರುವ ‘ಛಲ ಬಿಡದ ಸಾಧಕಿಯರು’ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಲೆಂಕೆಪ್ಪ ವಾಲೇಕಾರ, ಪ್ರಗತಿಪರ ರೈತ ದೇವೆಂದ್ರಪ್ಪ ಬಳೂಟಗಿ, ಹಿರಿಯ ಪತ್ರಕರ್ತ ಪ್ರಸನ್ನಕುಮಾರ ದೇಸಾಯಿ , ಜಿ.ಪಂ ಮಾಜಿ ಸದಸ್ಯ ಕೆ.ಮಹೇಶ ,
ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಮಾತನಾಡಿದರು.
ಮುಖಂಡ ಅಮರೇಗೌಡ ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜೇಸಾಬ್ ಕೋಳುರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಬಸವರಾಜ ಮ್ಯಾದರಡೊಕ್ಕಿ, ಗಂಗಮ್ಮ, ಹಂಪಮ್ಮ, ದುರಗೇಶ, ಪ್ರಮುಖರಾದ ಬಸನಗೌಡ ಎನ್.ಪಾಟೀಲ, ಬಸವರಾಜ ಬಂಡೇರ್, ದೊಡ್ಡನಗೌಡ ಪಾಟೀಲ. ಹಿರೇಮುದಕಪ್ಪ ಬಂಡೇರ , ಶಂಕ್ರಪ್ಪ ಗೆದಗೇರಿ, ನಿಂಗಪ್ಪ ಬಾರಕೇರ, ಸಂಗಯ್ಯ ಹಿರೇಮಠ, ಪರಸಪ್ಪ ಚಿಟಗಿ, ದೊಡ್ಡಬಸವ ಪೊಲೀಸ್‌ಪಾಟೀಲ, ಶಿವನಗೌಡ ಪೊಲೀಸ್‌ಪಾಟೀಲ ಮತ್ತು ಗ್ರಾಮಸ್ಥರು ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.