ಕುಷ್ಟಗಿ: ನ್ಯಾನೊ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಿಯಾಪುರ ಬಳಿ ಭಾನುವಾರ ರಾತ್ರಿ ನಡೆದಿದೆ.
ಮಡಿಕೇರಿ ಗ್ರಾಮದ ಅಮರೇಶ ಶಿವಪ್ಪ ಹರಿಜನ (30) ಮೃತ ವ್ಯಕ್ತಿಯಾಗಿದ್ದು ಹನುಮಸಾಗರ ಖಾಸಗಿ ಶಾಲೆಯ ಶಿಕ್ಷಕ ಎನ್ನಲಾಗಿದೆ. ನಾಗರಪಂಚಮಿ ನಿಮಿತ್ತ ಮಡಿಕೇರಿಯಿಂದ ಇಳಕಲ್ ಬಳಿಯ ಕೊಡಗಲಿಗೆ ತನ್ನ ಅಕ್ಕನನ್ನು ಕರೆದುಕೊಂಡು ಬರಲು ಬೈಕ್ ಮೇಲೆ ಹೋಗುತ್ತಿದ್ದಾಗ ಮಿಯಾಪುರ ಸೀಮಾಂತರದಲ್ಲಿ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತನ ಒಂದು ಕಾಲು ತುಂಡಾಗಿ ಬಿದ್ದಿದ್ದು ಸೋಮವಾರ ಬೆಳಿಗ್ಗೆ ರಸ್ತೆ ಪಕ್ಕದ ಜಮಿನಿನಲ್ಲಿ ಪತ್ತೆಯಾಗಿದೆ. ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಮಿಯಾಪುರದ ರವಿಚಂದ್ರ ನರಸಪ್ಪನವರ ವಿರುದ್ಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.