
ಕೊಪ್ಪಳ: ‘ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಶಿಕ್ಷಕರು ಸಹನೆ, ತಾಳ್ಮೆ ರೂಢಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುತ್ತದೆ’ ಎಂದು ಶಿಕ್ಷಣ ತಜ್ಞ ಟಿ.ವಿ.ಮಾಗಳದ ಹೇಳಿದರು.
ನಗರದ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ 1989-90ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ‘ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆಯೂ ಒಂದೇ ಬಗೆಯ ಕಾಳಜಿ ವಹಿಸಬೇಕು. ಉದಾಸೀನತೆ ಸಲ್ಲದು, ಇದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಡಲಿಪೆಟ್ಟು ಕೊಟ್ಟಂತಾಗುತ್ತದೆ’ ಎಂದರು.
‘ಪಾಲಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರದೇ ಅವರ ಅಭಿರುಚಿಗೆ ತಕ್ಕಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಅಮರೇಶಪ್ಪ ಕರಡಿ, ವೇದಿಕೆ ಮೇಲಿದ್ದ ನಿವೃತ್ತ ಶಿಕ್ಷಕ ಬಳಗದ ಗವಿಸಿದ್ದಪ್ಪ ಕೊಪ್ಪಳ, ಎಂ.ಎಂ. ಕಂಬಾಳಿಮಠ, ಎಸ್.ಸಿ. ಹಿರೇಮಠ, ವಿ.ಕೆ. ಜಾಗಟಗೇರಿ, ಪಿ.ಡಿ. ಬಡಿಗೇರ, ಗವಿಸಿದ್ದಪ್ಪ ಚಲುವಾದಿ, ಬಿ.ವಿ. ರಾಮರೆಡ್ಡಿ ಮತ್ತಿತರರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಹೇಮಂತಕುಮಾರ ದೊಡ್ಡಮನಿ, ಗಂಗಾಧರ ಕೇಸರಿಮಠ, ಸತ್ಯನಾರಾಯಣ ಕುಲಕರ್ಣಿ, ಲಿಂಗರಾಜ ಗೆಜ್ಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.