ADVERTISEMENT

ಪಠ್ಯಪುಸ್ತಕ ವಿತರಣೆ; ಸಿಹಿಯೂಟ, ಆಟ

ಬೇವಿನಹಾಳ ಸರ್ಕಾರಿ ಶಾಲೆ ಆರಂಭ: ದಾಖಲಾತಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:32 IST
Last Updated 30 ಮೇ 2025, 16:32 IST
ಕಾರಟಗಿ ಸಮೀಪದ ಬೇವಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳ ಬಳಿಕ ವಿದ್ಯಾರ್ಥಿಗಳಿಗೆ ಗಣ್ಯರು ಪಠ್ಯಪುಸ್ತಕಗಳನ್ನು ವಿತರಿಸಿದರು
ಕಾರಟಗಿ ಸಮೀಪದ ಬೇವಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳ ಬಳಿಕ ವಿದ್ಯಾರ್ಥಿಗಳಿಗೆ ಗಣ್ಯರು ಪಠ್ಯಪುಸ್ತಕಗಳನ್ನು ವಿತರಿಸಿದರು   

ಕಾರಟಗಿ: ತಾಲ್ಲೂಕಿನ ಬೇವಿನಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು, ಶಿಕ್ಷಕರು ವಿಭಿನ್ನ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನವನ್ನು ಮಾಡಿದರು.

ಜಾಥಾ: ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಹಾಕುತ್ತಾ ಗ್ರಾಮದ ಗಲ್ಲಿ, ಗಲ್ಲಿಗಳಲ್ಲಿ ಸಂಚರಿಸಿ, ರೈಸ್‌ಮಿಲ್ ಕೂಲಿಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಜಾಗೃತಿ ಮೂಡಿಸಿದರು.
‘ಸಾಲಿ ಕಲಿಯದೆ ನಮ್ಮ ಬಾಳೇ ಅತಂತ್ರ ಆಗೈತಿ ನಮ್ಮ ಮಕ್ಳನ್ನ ಶಾಲೆಗೆ ಕಳಿಸ್ತೀವಿ, ಅವ್ರ ಬದುಕು ಛಲೋ ಆಗ್ಲಿ’ ಎಂದು ಕೂಲಿಕಾರ್ಮಿಕರು ಪ್ರತಿಕ್ರಿಯಿಸಿದರು.

ಸಿಹಿಯೂಟ: ಶಾಲಾರಂಭದ ಮೊದಲ ದಿನ ಆವರಣವನ್ನು ಶೃಂಗರಿಸಲಾಗಿತ್ತು. ಹಬ್ಬದ ವಾತಾವರಣದಲ್ಲಿ ಸಿಹಿಯೂಟ ನೀಡಲಾಯಿತು.
ಪಠ್ಯಪುಸ್ತಕ ವಿತರಣೆ: ಬೇವಿನಹಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ ಹಿರೇಮಠ ಪ್ರಮುಖರಾದ ಭೀಮಣ್ಣ ಬೋವಿ, ರೈತ ಸಂಘದ ಮುಖಂಡ ಸಿದ್ದಪ್ಪ ಶಿಕ್ಷಣ ಪ್ರೇಮಿಗಳು ಮಕ್ಕಳಿಗೆ ಮೊದಲ ದಿನವೇ ಉಚಿತ ಪಠ್ಯಪುಸ್ತಕ ವಿತರಿಸಿದರು.
ಮೋಜಿನ ಆಟ: ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಶಿಕ್ಷಕರು, ವಿದ್ಯಾರ್ಥಿಗಳು ಮೋಜಿನ ಆಟಗಳನ್ನು ಆಡಿ ಆನಂದಿಸಿದರು.
ಮುಖ್ಯೋಪಾಧ್ಯಾಯ ಕಳಕೇಶ ಡಿ. ಗುಡ್ಲಾನೂರ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಗ್ರಾಪಂ ಸಿಬ್ಬಂದಿ ರೇಣುಕಾ, ಸುನೀತಾ, ಶಿಕ್ಷಕರು ಉಪಸ್ಥಿತರಿದ್ದರು.

ADVERTISEMENT

ಪುಷ್ಪ ನೀಡಿ ಸ್ವಾಗತ: ಶಾಲಾ ಪ್ರಾರಂಭೋತ್ಸವ ದಿನ ಪಟ್ಟಣದ ಉನ್ನತಿಕರಿಸಿದ ಬಾಲಕರ, ಬಾಲಕಿಯರ ಸರ್ಕಾರಿ ಹಿರಿಯ ‌ಪ್ರಾಥಮಿಕ ಶಾಲೆಯಲ್ಲಿ ಆಗಮಿಸಿದ ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸಿಕೊಳ್ಳಲಾಯಿತು.

ಗಣ್ಯರು ಮೊದಲ ದಿನವೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ನಾಗರಾಜ ಅರಳಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಆಂಜನೇಯ ಬೇವಿನಾಳ, ವೆಂಕಟೇಶ ‌ಈಡಿಗೇರ , ಉಪಾಧ್ಯಕ್ಷೆಯರಾದ ಪವಿತ್ರ ವೆಂಕಟೇಶ, ಮಮತಾ ಹಾಗೂ ಸದಸ್ಯರಾದ ಸಲಿಮಾ, ಕಾಸಂಬಿ, ಮಂಜುಳಾ, ಅಪ್ಪಣ್ಣ, ಶ್ರೀದೇವಿ ಮುಖ್ಯಗುರುಗಳಾದ ಬಸಯ್ಯ ಮಠ, ಶ್ಯಾಂ ಸುಂದರ್ ಇಂಜಿನ್, ಸಿಆರ್‌ಪಿ ತಿಮ್ಮಣ್ಷ ನಾಯಕ , ಶಿಕ್ಷಕರಾದ ಅಮರೇಶ ಮೈಲಾಪುರ, ರಾಮಪ್ಪ, ಪ್ರಮೀಳಾ ದೇವಿ, ಶಾರದಾ, ಸುವರ್ಣ ಉಪಸ್ಥಿತರಿದ್ದರು.

ಕಾರಟಗಿಯ ಬಾಲಕರ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾರಂಭದ ಮೊದಲ ದಿನ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.