ಗಂಗಾವತಿ: ತಾಲ್ಲೂಕಿನ ಆನೆಗುಂದಿ ಗ್ರಾಮದ ತುಂಗಭದ್ರಾ ನದಿ ಮಧ್ಯದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ರಘುವರ್ಯ ತೀರ್ಥರ ಆರಾಧನಾ ಮಹೋತ್ಸವದ ಉತ್ತರರಾಧನೆ ಭಾನುವಾರ ಸಂಪನ್ನಗೊಂಡಿತು.
ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀರಘುವರ್ಯತೀರ್ಥರ ಉತ್ತರಾರಾಧನೆ ಅಂಗವಾಗಿ ನವವೃಂದಾವನದಲ್ಲಿ ಉತ್ತರಾಧಿಮಠದ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ನ್ಯಾಯ ಸುಧಾಪಾಠ, ಭಕ್ತರಿಗೆ ಮುದ್ರಾಧಾರಣೆ, ರಘುವರ್ಯತೀರ್ಥರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ, ಯತಿಗಳಿಗೆ ಹಸ್ತೋದಕ, ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗ, ಸಮಸ್ತ ಭಕ್ತರಿಗೆ ಫಲಮಂತ್ರಾಕ್ಷತೆ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಮದುತ್ತರಾದಿ ಮಠಾಧೀಶ ಮತ್ಸತ್ಯಾತ್ಮ ತೀರ್ಥರು ಮಾತನಾಡಿ,ಮೂರು ರಘುಗಳ ಮಧ್ಯರಾದವರ ಮಧ್ಯಾರಾಧನೆ ಇದು. ಹೇಗೆಂದರೆ ಇವರ ಗುರುಗಳು ರಘುನಾಥತೀರ್ಥರು, ಇವರು ರಘುವರ್ಯತೀರ್ಥರು ಇವರ ಶಿಷ್ಯರು ರಘೂತ್ತಮ ತೀರ್ಥರು. ಈ ಮೂವರ ಮಧ್ಯದಲ್ಲಿ ಇರುವವರು ಆರಾಧ್ಯದೈವರಾದವರು. ಅವರ ಮಧ್ಯಾರಾಧನೆ ಜೇಷ್ಠ ಕೃಷ್ಣ ತೃತೀಯಾ ಎಂಬುದಾಗಿ ಎಂದು ಉಪದೇಶ ನೀಡಿದರು.
ಈ ವೇಳೆ ಮಠದ ದಿವಾನರಾದ ಪಂಡಿತ ಶಶಿಧರಚಾರ್ಯ, ಗಲಗಲಿ ಪ್ರಹ್ಲಾದ ಆಚಾರ್ಯ, ಮಹಿಷಿ ಆನಂದ ಆಚಾರ್ಯ, ತಡ ಕೋಡು ವಾದಿರಾಜ ಆಚಾರ್ಯ, ಉಮರ್ಜಿ ರಾಮಾಚಾರ್ಯ, ಬಳ್ಳಾರಿ ರಾಘವೇಂದ್ರ ಆಚಾರ್ಯ, ವ್ಯವಸ್ಥಾಪಕ ಅಕ್ಕಲಕೋಟ ಆನಂದಾಚಾರ್ಯ, ಜಿತೇಂದ್ರ ಆಚಾರ್ಯ ಜೋಶಿ, ಸತ್ಯಬೋಧಾಚಾರ್ಯ ರಟ್ಟಿಹಳ್ಳಿ, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಪ್ರಸನ್ನಾಚಾರ್ಯ ಕಟ್ಟಿ, ಕೃಷ್ಣಮೂರ್ತಿ ಆಚಾರ್ಯ ಮಹಿಶಿ, ವಿಷ್ಣು ತೀರ್ಥ ಆಚಾರ್ಯ ಜೋಶಿ, ಕಾರ್ತಿಕ್ ಆಚಾರ್ಯ ಪಂಡರಪುರ, ಅಖಿಲ ಆಚಾರ್ಯ ಅತ್ರೆ, ಹುಲಿಗಿ ನಾರಾಯಣ ಆಚಾರ್ಯ, ವೆಂಕಟಗಿರಿ ಆಚಾರ್ಯ ಅನ್ವೇರಿ, ಅಡವಿ ರಾಯರು, ವೆಂಕಟೇಶ ಕೆಸಕ್ಕಿ, ಶ್ರೀಪಾದ ಕೃಷ್ಣಮೂರ್ತಿ, ವಿನೋದ ಪ್ರಸನ್ನ ಅನ್ವೇರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.