ADVERTISEMENT

‘ನಾವೆಲ್ಲರೂ ಅಭಿವೃದ್ಧಿಗೆ ಶ್ರಮಿಸೋಣ’

ಮುಸ್ಲಿಂ ಸಂಘಟನೆಗಳಿಂದ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:55 IST
Last Updated 15 ಆಗಸ್ಟ್ 2022, 16:55 IST
ಕೊಪ್ಪಳದಲ್ಲಿ ಸೋಮವಾರ ಇಲಾಹಿ ಪಂಚ್ ಕಮಿಟಿ ಮತ್ತು ಇಲಾಹಿ ಮಸ್ಜೀದ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು
ಕೊಪ್ಪಳದಲ್ಲಿ ಸೋಮವಾರ ಇಲಾಹಿ ಪಂಚ್ ಕಮಿಟಿ ಮತ್ತು ಇಲಾಹಿ ಮಸ್ಜೀದ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು   

ಕೊಪ್ಪಳ: ‘ನೈತಿಕತೆಯ ದಾರಿಯಲ್ಲಿ ಸಾಗುವ ಮೂಲಕ ದೇಶದ ಅಭಿವೃದ್ದಿಗೆ ಶ್ರಮಿಸೋಣ’ ಎಂದು ನಿವೃತ್ತ ಪಿಎಸ್ಐ ಫಕ್ರುದ್ದೀನ್ ಸಾಬ್ ಹೇಳಿದರು.

ನಗರದ ದೇವರಾಜ ಅರಸ್ ಕಾಲೊನಿಯಲ್ಲಿ ಸೋಮವಾರ ಇಲಾಹಿ ಪಂಚ್ ಕಮಿಟಿ ಮತ್ತು ಇಲಾಹಿ ಮಸ್ಜೀದ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಿತ್ತೂರು ಚನ್ನಮ್ಮ ಛದ್ಮವೇಷ ಧರಿಸಿದ್ದ ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬ್ರಿಟಿಷರಿಗೆ ಕಿತ್ತೂರು ಚನ್ನಮ್ಮ ಹೇಳಿದ್ದ ಸಂಭಾಷಣೆ ಹೇಳಿ ಗಮನ ಸೆಳೆದರು.

ADVERTISEMENT

ಇಲಾಹಿ ಮಸ್ಜೀದ್ ಹಫೀಜ್‌ ಇಸ್ಮಾಯಿಲ್, ನಗರಸಭೆ ಸದಸ್ಯ ಅನ್ನಪೂರ್ಣಮ್ಮ, ಇಲಾಹಿ ಪಂಚ್ ಕಮಿಟಿ ಅಧ್ಯಕ್ಷ ಮೌಲಾಸಾಬ ಬಿಸರಳ್ಳಿ , ಉಪಾಧ್ಯಕ್ಷ ನಿಸಾರ್ ಅಡ್ಡೆವಾಲೆ, ಕಾರ್ಯದರ್ಶಿ ಮರ್ದಾನಸಾಬ ಸಿದ್ದಿಕಿ, ಮಸ್ಜೀದ್ ಕಮಿಟಿ ಅಧ್ಯಕ್ಷ ಖಾದರ ಅಲಿ, ಉಪಾಧ್ಯಕ್ಷ ರಫೀಕ್ ಸರದಾರ, ಕಾರ್ಯದರ್ಶಿ ಜಾವೀದ್, ಕಾಲೊನಿಯ ಹಿರಿಯರಾದ ಈರಣ್ಣ ಕಾರಪುಡಿ, ಹಬೀಬ ಪಾಷಾ, ನೌಜವಾನ್ ಕಮಿಟಿಯ ನೂರಪಾಷಾ ಅರಗಂಜಿ, ದಸ್ತಗೀರ್, ಮೆಹಬೂಬ ಪಾಷಾ ಕುಲುಮಿ, ರಜಾಕ್ ಹಂಡಿ, ಖಲೀಲ್ ಮಾನ್ವಿ, ಮುಖ್ಯಶಿಕ್ಷಕ ದೇವಪ್ಪ ಕುಮುಟದ್ ಇದ್ದರು.

ತಿರಂಗಾ ಯಾತ್ರೆ: ಮುಸ್ಲಿಂ ಯುವ ಸಮಿತಿ, ವೆಲ್ಫೇರ್ ಪಾರ್ಟಿ, ಶಹೀದ್ ಆಶ್ಫಾಕ್ ಉಲ್ಲಾಖಾನ್ ವೃತ್ತ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಗಡಿಯಾರ ಕಂಬದಿಂದ ಟಿಪ್ಪು ಸುಲ್ತಾನ್ ವೃತ್ತದದ ತನಕ ತಿರಂಗಾ ಯಾತ್ರೆ ನಡೆಯಿತು.

ಮುಖಂಡರಾದ ಸಲೀಂ ಮಂಡಲಗೇರಿ, ವೆಲ್ಫೇರ್ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಆದಿಲ್‌ ಪಟೇಲ್, ಸಲೀಂ ಗೊಂಡಬಾಳ, ತೌಸೀಫ್ ಮಾಳೆಕೊಪ್ಪ , ಸಲೀಂ ಕುದರಿಮೋತಿ, ನಿವೃತ್ತ ಉಪ ತಹಶೀಲ್ದಾರ್‌ ಲಾಯಖ್ ಅಲಿ ಸಾಹೇಬ್, ಜಮೀರ್ ಖಾದ್ರಿ , ಇಮ್ರಾನ್ ಪಾಷಾ ಅರಗಂಜಿ, ನಗರಸಭೆ ಸದಸ್ಯೆ ಸಬೀಹಾ ಪಟೇಲ್, ಮಾಜಿ ಸದಸ್ಯ ಮಾನವಿ ಪಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.