ADVERTISEMENT

ತೊಗರಿ ಕೇಂದ್ರದ ಸದುಪಯೋಗ ಪಡೆಯಿರಿ: ರಾಜ್ ಮಹ್ಮದಸಾಬ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:48 IST
Last Updated 17 ಜನವರಿ 2026, 6:48 IST
ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ಸಹಕಾರಿ ಸಂಘದ ಕಚೇರಿಯಲ್ಲಿ ಶುಕ್ರವಾರ ತೊಗರಿ ಖರೀದಿ‌ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ‌ ಕೆಲ್ಲೂರು ಅವರು ಉದ್ಘಾಟಿಸಿದರು
ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ಸಹಕಾರಿ ಸಂಘದ ಕಚೇರಿಯಲ್ಲಿ ಶುಕ್ರವಾರ ತೊಗರಿ ಖರೀದಿ‌ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ‌ ಕೆಲ್ಲೂರು ಅವರು ಉದ್ಘಾಟಿಸಿದರು   

ಕನಕಗಿರಿ: ಗ್ರಾಮದ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ‌ ಸಂಘದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಅಧ್ಯಕ್ಷ ರಾಜ್ ಮಹ್ಮದಸಾಬ್ ತಿಳಿಸಿದರು.

ಸಮೀಪದ ಹುಲಿಹೈದರ ಗ್ರಾಮದ ಸಹಕಾರಿ ಸಂಘದ ಕಚೇರಿಯಲ್ಲಿ ಶುಕ್ರವಾರ ತೊಗರಿ ಖರೀದಿ‌ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತನ ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ ತೊಗರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿ ಮಾಡಲಾಗುವುದು. ನೋಂದಣಿ ಪ್ರಕ್ರಿಯೆ ಮಾ.6 ಹಾಗೂ ಮಾ.16 ಖರೀದಿ ಕೊನೆಗೊಳ್ಳಲಿದೆ. ಹೋಬಳಿ ಭಾಗದ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ‌ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ‌ ಕೆಲ್ಲೂರು, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯ ರಾಜಾಸಾಬ್ ಕಟ್ಟಿಮನಿ,‌ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ, ನಿರ್ದೇಶಕರಾದ ಮೈಬೂಸಾಬ್ ದೋಟಿಹಾಳ, ಹನುಮಂತಪ್ಪ ಗೋಡಿ, ಅಮೀನಸಾಬ್, ಮಾರೆಪ್ಪ ಹುಬ್ಬಳ್ಳಿ,  ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ಪ್ರಮುಖರಾದ ಗೋಸ್ಲೆಪ್ಪ ಗದ್ದಿ, ದುರಗಪ್ಪ ಹರಿಜನ,‌ಅಮರೇಶ ಪಟ್ಟಣಶೆಟ್ರ, ಅಯ್ಯಣ್ಣ ಕನ್ನಾಳ, ಮಾರುತಿ ಗದ್ದಿ ಸೇರಿದಂತೆ ಪ್ರಮುಖರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.