ಕಾರಟಗಿ: ಚಿತ್ರದುರ್ಗ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಘಟನೆಯನ್ನು ಇಲ್ಲಿಯ ಭಗೀರಥ ಉಪ್ಪಾರ ಸಮಾಜದ ತಾಲ್ಲೂಕು ಘಟಕ ಖಂಡಿಸಿದೆ.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿದ ಸಮಾಜದವರು, ಅತ್ಯಾಚರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಕಂದಾಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಿದ್ದು, ಇನ್ನುಳಿದವರನ್ನು ಶೀಘ್ರ ಪತ್ತೆ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು. ಮಕ್ಕಳ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಬೇಕು. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಸಮಾಜದ ಗೌರವಾಧ್ಯಕ್ಷರಾದ ತಿಮ್ಮಣ್ಣ ಹಗೇದಾಳ, ಶರಣಪ್ಪ ಮೈಲಾಪುರ, ಅಧ್ಯಕ್ಷ ಬಂಡಿ ಅಯ್ಯಪ್ಪ, ಪ್ರಮುಖರಾದ ಶಿವಮೂರ್ತೆಪ್ಪ, ಗುರುರಾಜ ಸಾಗರ್, ಅಯ್ಯಪ್ಪ ಉಪ್ಪಾರ, ರಾಜಪ್ಪ ಗುಡೂರು, ಯಂಕೋಬ ಪೂಜಾರಿ, ರಾಘವೇಂದ್ರ, ಶೇಷಗಿರಿ ಕಟ್ಟಿಮನಿ ವಕೀಲ, ದೇವರಾಜ ಮೈಸೂರು, ಶ್ರೀನಿವಾಸ ಹಗೇದಾಳ, ಚನ್ನಪ್ಪ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.