ADVERTISEMENT

ಕೊಪ್ಪಳ | ರಸಗೊಬ್ಬರ ಕೊರತೆ: ಮಣ್ಣು ತಿಂದಿದ್ದ ರೈತನಿಗೆ 2 ಚೀಲ ಯೂರಿಯಾ ಕೊಟ್ಟ BJP

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 12:37 IST
Last Updated 28 ಜುಲೈ 2025, 12:37 IST
   

ಕೊಪ್ಪಳ: ಯೂರಿಯಾ ರಸಗೊಬ್ಬರ ಸಿಗದ ಕಾರಣಕ್ಕೆ ಮೂರು ದಿನಗಳ ಹಿಂದೆ ನಗರದಲ್ಲಿ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದ ತಾಲ್ಲೂಕಿನ ಕುಣಿಕೇರಿ ತಾಂಡಾದ ರೈತ ಚಂದ್ರಪ್ಪ ಬಡಗಿ ಅವರ ಮನೆಗೆ ಸೋಮವಾರ ಬಿಜೆಪಿ ಮುಖಂಡರು ತೆರಳಿ ಸಾಂಕೇತಿಕವಾಗಿ ಎರಡು ಚೀಲ ಯೂರಿಯಾ ನೀಡಿ ಸಂತೈಸಿದರು. 

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ನೇತೃತ್ವದಲ್ಲಿ ಪಕ್ಷದ ಜಿಲ್ಲೆಯ ಮುಖಂಡರು ರೈತನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ರೈತನ ಮನೆ ಮುಂದೆ ನಿಂತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಡಹಳ್ಳಿ ‘ರೈತರ ಬಗ್ಗೆ ಕಾಳಜಿ ಇಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರ ಅವರಿಗೆ ಮಣ್ಣು ತಿನ್ನಿಸುತ್ತಿದೆ. ಕೇಂದ್ರ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ನೀಡಿದರೂ ರಾಜ್ಯ ಸರ್ಕಾರ ಅರ್ಹರಿಗೆ ತಲುಪಿಸುವ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.