ADVERTISEMENT

ರಸ್ತೆಗೆ ವೈಜನಾಥ ಪಾಟೀಲ ಹೆಸರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:46 IST
Last Updated 18 ಸೆಪ್ಟೆಂಬರ್ 2020, 6:46 IST
ಕುಷ್ಟಗಿಯಲ್ಲಿನ ಕುರುಬನಾಳ ರಸ್ತೆಗೆ ವೈಜನಾಥ ಪಾಟೀಲ ಹೆಸರು ನಾಮಕರಣಗೊಳಿಸಿದ ಫಲಕವನ್ನು ಅನಾವರಣ ಮಾಡಲಾಯಿತು
ಕುಷ್ಟಗಿಯಲ್ಲಿನ ಕುರುಬನಾಳ ರಸ್ತೆಗೆ ವೈಜನಾಥ ಪಾಟೀಲ ಹೆಸರು ನಾಮಕರಣಗೊಳಿಸಿದ ಫಲಕವನ್ನು ಅನಾವರಣ ಮಾಡಲಾಯಿತು   

ಕುಷ್ಟಗಿ: ಪಟ್ಟಣದ ಮಲ್ಲಯ್ಯ ವೃತ್ತದ ಬಳಿ ಇರುವ ಕುರುಬನಾಳ ರಸ್ತೆಗೆ ಮಾಜಿ ಸಚಿವ ದಿ.ವೈಜನಾಥ ಪಾಟೀಲ ಅವರ ಹೆಸರನ್ನು ನಾಮಕರಣಗೊಳಿಸಿದ ಫಲಕವನ್ನು ಗುರುವಾರ ಅನಾವರಣ ಗೊಳಿಸಲಾಯಿತು.

ಗುರುವಾರ ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಇಲ್ಲಿ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹೈಕ ಹೋರಾಟ ಸಮಿತಿ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ತಾಜುದ್ದೀನ ದಳಪತಿ ಇತರರು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371 ಜೆ ಕಲಂಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ನಡೆದ ಹೋರಾಟದಲ್ಲಿ ದಿ.ವೈಜನಾಥ ಪಾಟೀಲ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

ಪುರಸಭೆ ಸದಸ್ಯೆ ಗೀತಾ ತುರಕಾಣಿ, ಸಯ್ಯದ್ ಮೈನುದ್ದೀನ್ ಮುಲ್ಲಾ, ಅಂಬಣ್ಣ ಭಜಂತ್ರಿ, ಮಹಾಂತೇಶ ಕಲಭಾವಿ. ಪ್ರಮುಖರಾದ ಅಮರೇಗೌಡ ಜಾಲಿಹಾಳ, ಅಮೃತರಾಜ ಜ್ಞಾನ ಮೋಟೆ, ಶಕುಂತಲಾ ಹಿರೇಮಠ, ಯಮನೂರ ಸಂಗಟಿ, ರವೀಂದ್ರ ಬಾಕಳೆ, ನಟರಾಜ ಸೋನಾರ, ರಮೇಶ, ಬಸವರಾಜ ಗಾಣಿಗೇರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.