ADVERTISEMENT

ವಾಲ್ಮೀಕಿ ಜಾತ್ರೆ; 51 ಕ್ವಿಂಟಲ್‌ ಅಕ್ಕಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:05 IST
Last Updated 10 ಫೆಬ್ರುವರಿ 2026, 7:05 IST
ಕಾರಟಗಿಯಿಂದ ವಾಲ್ಮೀಕಿ ಜಾತ್ರೆಯ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು
ಕಾರಟಗಿಯಿಂದ ವಾಲ್ಮೀಕಿ ಜಾತ್ರೆಯ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು   

ಕಾರಟಗಿ: ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು.

ರಾಜ್ಯ ಮಟ್ಟದ ಮಹಾಜಾತ್ರೆ, ದಾಸೋಹಕ್ಕೆ ನಮ್ಮ ಅಳಿಲು ಸೇವೆಯಾಗಿ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ ಎಂದು ದಢೇಸೂಗೂರು ಪ್ರತಿಕ್ರಿಯಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ಧಡೇಸೂಗೂರು, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ತಾಲ್ಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಗಿರಿಯಪ್ಪ ಬೂದಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಧನಂಜಯ, ಫಕೀರಪ್ಪ ನಾಯಕ, ಮಖಂಡರಾದ ನಾಗಡಗೌಡ, ರಮೇಶ ನಾಡಿಗೇರ, ಪ್ರಭುರಾಜ ಬೂದಿ, ಸುರೇಶ ಧಡೇಸೂಗೂರು, ವೀರಭದ್ರಪ್ಪ ಚನ್ನಳ್ಳಿ, ಹನಮಂತಪ್ಪ ಕಬ್ಬೆರ, ಈರಣ್ಣ ಬೆರ್ಗಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.