ADVERTISEMENT

ಹುಲೇಗುಡ್ಡ: ವಾಲ್ಮೀಕಿ ಜಯಂತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 1:22 IST
Last Updated 7 ನವೆಂಬರ್ 2020, 1:22 IST
ಯಲಬುರ್ಗಾ ತಾಲ್ಲೂಕು ಹುಲೇಗುಡ್ಡ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು
ಯಲಬುರ್ಗಾ ತಾಲ್ಲೂಕು ಹುಲೇಗುಡ್ಡ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು   

ಯಲಬುರ್ಗಾ: ‘ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ. ಆದ್ದರಿಂದ ಎಲ್ಲರಿಗೂ ಶಿಕ್ಷಣ ಕೊಡಿಸಬೇಕು’ ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾನಪ್ಪ ಪೂಜಾರ ಹೇಳಿದರು.

ತಾಲ್ಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕಲ್ಪಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರದ್ದಾಗಿದೆ ಎಂದರು.

ADVERTISEMENT

ಮುಖಂಡ ಶ್ರೀಕಾಂತಗೌಡ ಮಾಲಿಪಾಟೀಲ ಮಾತನಾಡಿ,‘ವಾಲ್ಮೀಕಿ ಮಹರ್ಷಿಯವರ ಸಾಹಿತ್ಯ ವಿಶ್ವಖ್ಯಾತಿಯಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳಪ್ಪ ಬಂಡ್ರಿ, ಯಲಬುರ್ಗಾ ಪಟ್ಟಣ ಪಂಚಾಯಿತಿ ಸದಸ್ಯ ಕಳಕಪ್ಪ ತಳವಾರ, ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಜ್ಜ ಗುರಿಕಾರ, ಜಿ.ಪಂ ಮಾಜಿ ಸದಸ್ಯ ಹನಮಗೌಡ ಸಾಲಭಾವಿ ಮಾತನಾಡಿದರು.

ಮುಖಂಡರಾದ ಮುದಿಯಪ್ಪ ಕರೆಕುರಿ, ಕುದರಿ ಯಲ್ಲಪ್ಪ ಗೌಡ್ರ, ಶರಣಪ್ಪ ಕಲ್ಲೂರ, ಶರಣಗೌಡ ಮಾಲಿ ಗೌಡ್ರ, ಹಾಲಪ್ಪ ಹಾಲಳ್ಳಿ, ಬಸವರಾಜ ಬೆದವಟ್ಟಿ, ಲಿಂಗರಾಜ ಹೋಸಮನಿ, ಕರಿಯಪ್ಪ, ಗುಂಡನಗೌಡ ಮಾಲಿ ಪಾಟೀಲ, ದುರಗನಗೌಡ, ಶರಣಗೌಡ, ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಚನ್ನಬಸವ ಕುಲಕರ್ಣಿ, ಹಿರಣ್ಯಾಕ್ಷಗೌಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹನುಮಗೌಡ ಮಾಲಿಪಾಟೀಲ ಇದ್ದರು.

ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.