ADVERTISEMENT

ತಾವರಗೇರಾ| ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ: ಪಿಎಸ್‌ಐ ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:56 IST
Last Updated 25 ಜನವರಿ 2026, 6:56 IST
ತಾವರಗೇರಾ ಪಟ್ಟಣದ ಶಶಿಧರಸ್ವಾಮಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಪಿಎಸ್‌ಐ ಚಂದ್ರಪ್ಪ.ಎಚ್‌ ಉದ್ಘಾಟಿಸಿದರು
ತಾವರಗೇರಾ ಪಟ್ಟಣದ ಶಶಿಧರಸ್ವಾಮಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಪಿಎಸ್‌ಐ ಚಂದ್ರಪ್ಪ.ಎಚ್‌ ಉದ್ಘಾಟಿಸಿದರು   

ತಾವರಗೇರಾ: ‘ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ’ ಎಂದು ತಾವರಗೇರಾ ಪಿಎಸ್‌ಐ ಚಂದ್ರಪ್ಪ.ಎಚ್‌ ಹೇಳಿದರು.

ಇಲ್ಲಿಯ ಶಶಿಧರಸ್ವಾಮಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತ ನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿ,‘ಮಕ್ಕಳಲ್ಲಿಯ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಪೋಷಕರು–ಶಿಕ್ಷಕರು ಮಾಡಬೇಕು. ಇಲಾಖೆಯಿಂದ ಮಕ್ಕಳ ಕಲಿಕೆಗೆ ವಿವಿಧ ಚಟುವಟಿಕೆಗಳನ್ನು ಪರಿಚಯಿಸುವ ಕಾರ್ಯ ಮಾಡಲಾಗುವುದು’ ಎಂದರು.

ADVERTISEMENT

ನಂತರ ವೇದಿಕೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಗಣ್ಯರನ್ನು ಸನ್ಮಾನಿ ಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರಗೌಡ ಪೊಲೀಸ್‌ ಪಾಟೀಲ, ಉಪಾಧ್ಯಕ್ಷ ಶರಣಪ್ಪ ಐಲಿ, ಕಾರ್ಯದರ್ಶಿ ಮಲ್ಲನಗೌಡ ಓಲಿ, ಕೋಶಾಧ್ಯಕ್ಷ ಪಂಪಣ್ಣ ಚಿಟ್ಟಿ, ನಿರ್ದೇಶಕರಾದ ಮಲ್ಲಿಕಾರ್ಜುನಗೌಡ, ಕುಬೇರಪ್ಪ ಖ್ಯಾಡೇದ್‌, ಮಲ್ಲಪ್ಪ ಗಲಗಲಿ, ಆಡಳಿತಾಧಿಕಾರಿ ಬಸನಗೌಡ, ಶಿಕ್ಷಣ ಸಂಯೋಜಕ ರಾಘಪ್ಪ, ಸಂಪನ್ಮೂಲ ವ್ಯಕ್ತಿ ಕಾಶಿನಾಥ ನಾಗಲಿಕರ, ದೈಹಿಕ ಶಿಕ್ಷಣಾರ್ಥಿ ನಾಗಪ್ಪ ಬಿಳಿಯಪ್ಪನವರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ತಿಪ್ಪಯ್ಯ ಹಿರೇಮಠ, ಪ್ರಾಚಾರ್ಯ ಎಸ್‌.ವಿ.ಹಿರೇಮಠ, ಆರ್‌.ಜೆ.ಅಂಬಿಗೇರ, ಮುಖ್ಯಶಿಕ್ಷಕಿ ಅಶ್ವಿನಿ ನಾಗಲೀಕರ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪಂಪಾಪತಿ, ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಭಾಕರ ಆವರೆಡ್ಡಿ, ಸ್ಫೂರ್ತಿ ಬ್ಯಾಂಕ್‌ನ ಅಧ್ಯಕ್ಷ ರವಿಂದ್ರ ಹೂಗಾರ ಮತ್ತು ಪೋಷಕರು, ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.