ಗಂಗಾವತಿ: ‘ಕಾಂಗ್ರೆಸ್ ಆಡಳಿತದಲ್ಲಿ ಆರ್ಥಿವಾಗಿ ಕುಸಿದ ಭಾರತ ದೇಶವನ್ನ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಭಾರತ ಸುಸಜ್ಜಿತ ರಾಷ್ಟ್ರವಾಗಿ ಮುನ್ನಡೆಯುತ್ತಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮರಳಿ ಸಮೀಪದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 11ವರ್ಷಗಳ ಸಾಧನೆ ಕುರಿತ ಅವಲೋಕನ ಹಾಗೂ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಮನಬಂದಂತೆ ಮಾತ ನಾಡುವ ಸಿಎಂ ಸಿದ್ದರಾಮಯ್ಯ ತಮ್ಮ ಎರಡೂವರೆ ವರ್ಷದ ಆಡಳಿತವಧಿಯಲ್ಲಿ ಜನರಿಗಾಗಿ ಯಾವ ಅಭಿವೃದ್ಧಿ ಕೆಲಸಗಳುನ್ನೂ ಮಾಡಿಲ್ಲ, ಯೋಜನೆಗಳನ್ನೂ ನೀಡಿಲ್ಲ. ಕುರ್ಚಿ ಉಳಿಸಿಕೊಳ್ಳಲು ಜಾತಿ ನಡುವೆ ವಿಷಬೀಜ ಬಿತ್ತಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಅಹಿಂದ ಸಮುದಾಯಗಳಿಗಾಗಿ ಯಾವ ಕೆಲಸಗಳನ್ನೂ ಮಾಡಿಲ್ಲ’ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ಪ್ರಧಾನಿ ಮೋದಿ ತಮ್ಮ 23ವರ್ಷಗಳ ಆಡಳಿತದಲ್ಲಿ ಕಪ್ಪುಚುಕ್ಕೆ, ಭ್ರಷ್ಟಾಚಾರ ಇಲ್ಲದೇ ರಾಜಕೀಯ ಮಾಡಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ಭ್ರಷ್ಟಾಚಾರ, ಹಗರಣದಲ್ಲೇ ಮಿಂದೆಳುತ್ತಿದೆ. ಕಾಂಗ್ರೆಸ್‌ನ 60 ವರ್ಷಗಳ ಆಡಳಿತವಧಿಯಲ್ಲಿ ಹಲವು ನಾಯಕರು ಜೈಲಿಗೆ ಹೋಗಿದ್ದಾರೆ, ಹಲವು ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ರಾಜ್ಯದ ಇತಿಹಾಸದಲ್ಲಿ ಸಿದ್ದರಾಮಯ್ಯ ನಡೆಸುತ್ತಿರುವುದು ಕೆಟ್ಟ ಸರ್ಕಾರ. ಇಂಥ ಆಡಳಿತವನ್ನು ನಾನೆಂದು ಕಂಡಿಲ್ಲ. ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಅಭಿವೃದ್ಧಿ ಮಾಡದೇ ಕುರ್ಚಿಗಾಗಿ ಸಿ.ಎಂ, ಡಿ.ಸಿ.ಎಂ ಜಗಳಕ್ಕೆ ಇಳಿದಿದ್ದಾರೆ. ಜಿಲ್ಲೆ ಗಾಂಜಾ, ಕ್ಲಬ್ ದಂಧೆ ಮೂಲಕ ಹದಗೆಟ್ಟು ಹೋಗಿದೆ. ಇಲ್ಲಿನ ಕಾಂಗ್ರೆಸ್ ಆಡಳಿತದ ಜನಪ್ರತಿನಿಧಿಗಳು ಇದನ್ನೇ ನೆಪಮಾಡಿಕೊಂಡು ಹಣಗಳಿಸುತ್ತಿದ್ದಾರೆ. ಕೇಂದ್ರಕ್ಕೆ ನರೇಂದ್ರ ಹೇಗೋ, ರಾಜ್ಯಕ್ಕೆ ವಿಜಯೇಂದ್ರ ಹಾಗೇ’ ಎಂದರು.
ಇದಕ್ಕೂ ಮುನ್ನ ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನದ ಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಮಾಜಿ ಸಚಿವ ಶ್ರೀರಾಮುಲು, ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೆಸೂಗುರು, ಮಾಜಿ ಶಾಸಕ ಪರಣ್ಣ ಮುನಗಳ್ಳಿ, ಸುಧಾಕರರೆಡ್ಡಿ, ಸಂಜೀವರೆಡ್ಡಿ, ಹೇ ಮಲತಾ ನಾಯಕ, ಶಿವರಾಮೇಗೌಡ, ಸೋಮಶೇಖರರೆಡ್ಡಿ, ಬಂಗಾರು ಹನುಮಂತ, ಕೆ.ವಿರೂಪಾಕ್ಷಪ್ಪ ಸೇರಿದಂತೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಖರ್ಗೆ ನೆಪಕ್ಕೆ ಮಾತ್ರ ಎಐಸಿಸಿಅಧ್ಯಕ್ಷರು. ಎಲ್ಲ ಅಧಿಕಾರ ಆಡಳಿತವನ್ನು ಸೋನಿಯಾ ಗಾಂಧಿ ರಾಹುಲ್ ಗಾಂಧಿಯೇ ನಡೆಸುತ್ತಾರೆ. ರಾಜ್ಯದಲ್ಲಿ ಅಭಿವೃದ್ಧಿಗಿಂತ ಕುರ್ಚಿ ಕಿತ್ತಾಟವೇ ಹೆಚ್ಚಾಗಿದೆಗೋವಿಂದ ಕಾರಜೋಳ ಸಂಸದ
ಜಿಲ್ಲೆಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಂತ ಮಹಾನುಭಾವ ಇದ್ದಾರೆ. ಸಿದ್ದರಾಮಯ್ಯ ಅವರನ್ನ ಬ್ಲಾಕ್‌ಮೇಲ್ ಮಾಡೋದೆ ಅವರ ಕೆಲಸಜನಾರ್ದನ ರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.