ADVERTISEMENT

ಗವಿಮಠದ ಜಾತ್ರೆಯ ಮಹಾರಥೋತ್ಸವ: ವಿಜಯಶಂಕರ್‌ಗೆ ಉದ್ಘಾಟನೆ ಗೌರವ

ಜ. 5ರಂದು ಗವಿಮಠದ ಜಾತ್ರೆಯ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:23 IST
Last Updated 8 ಡಿಸೆಂಬರ್ 2025, 6:23 IST
ಸಿ.ಎಚ್‌. ವಿಜಯಶಂಕರ್
ಸಿ.ಎಚ್‌. ವಿಜಯಶಂಕರ್   

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ.ಎಚ್‌. ವಿಜಯಶಂಕರ್‌ ಅವರು ಉದ್ಘಾಟನೆ ನೆರವೇರಿಸುವರು. 

ಈ ಕುರಿತು ಗವಿಮಠ ತನ್ನ ಪ್ರಕಟಣೆ ಹೊರಡಿಸಿದ್ದು ’ಈ ಬಾರಿ ಸಿ.ಎಚ್‌. ವಿಜಯಶಂಕರ್‌ ಜಾತ್ರೆ ಉದ್ಘಾಟಿಸುವರು’ ಎಂದು ತಿಳಿಸಿದೆ. 

ಅವರು ಮೂಲತಃ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದವರು. ಇದೇ ವರ್ಷದ ಫೆ. 22ರಂದು ವಿಜಯಶಂಕರ್‌ ಅವರು ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡಿದ್ದರು. ಅವರಿಗೆ ತವರು ಜಿಲ್ಲೆಯ ಐತಿಹಾಸಿಕ ಜಾತ್ರೆ ಉದ್ಘಾಟಿಸುವ ಗೌರವ ಲಭಿಸಿದೆ.  

ADVERTISEMENT

ವಿಜಯಶಂಕರ್‌ ಜೊತೆಗೆ ಶಿಶು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಲೇಖಕ ಹಾಗೂ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ನಾ.ಸೋಮೇಶ್ವರ, ಚಲನಚಿತ್ರ ನಟ ದತ್ತಣ್ಣ, ಮೂರುಸಾವಿರ ಮಠದ ಸ್ವಾಮೀಜಿ, ಕಡಬಗೇರಿ ಮಂಜುನಾಥ, ರಘು ಆಚಾರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವರು.  

ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ 
ನಾ. ಸೋಮೇಶ್ವರ
ನಟ ದತ್ತಣ್ಣ

ಈ ಬಾರಿ ಜಾಥಾ ಇಲ್ಲ?

ಕೊಪ್ಪಳ: ಪ್ರತಿವರ್ಷದ ಜಾತ್ರೆಯ ಪೂರ್ವದಲ್ಲಿ ಪ್ರಮುಖ ಕಾರ್ಯಕ್ರಮವಾಗಿರುತ್ತಿದ್ದ ಜಾಗೃತಿ ಜಾಥಾ ಈ ಬಾರಿ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.  ಕಳೆದ ವರ್ಷ ‘ವಿಕಲಚೇತನನ ನಡೆ ಸಕಲಚೇತನದ ಕಡೆ’ ಜಾಗೃತಿ ಜಾಥಾ ನಡೆದಿತ್ತು. ಪ್ರತಿ ಬಾರಿಯೂ ಒಂದೊಂದು ಹೊಸ ವಿಷಯದ ಮೂಲಕ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿ ದೊಡ್ಡಮಟ್ಟದಲ್ಲಿ ಜಾಥಾ ನಡೆಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.