ADVERTISEMENT

ಸಂಗಣ್ಣ ಕರಡಿ ಗೆಲುವಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:53 IST
Last Updated 23 ಮೇ 2019, 13:53 IST
ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಗಣ್ಣ ಕರಡಿ ಅವರು ಜಯಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಿದರು
ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಗಣ್ಣ ಕರಡಿ ಅವರು ಜಯಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಿದರು   

ಯಲಬುರ್ಗಾ: ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಜಯದಾಖಿಲಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ವಿವಿಧ ವೃತ್ತದ ಬಳಿ ಗುರುವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ, ಕನ್ನಡ ಕ್ರಿಯಾ ಸಮಿತಿ ವೃತ್ತ, ಕನಕದಾಸ ವೃತ್ತದಲ್ಲಿ ಕೇಕೆ ಹಾಕುತ್ತಾ,ಘೋಷಣೆ ಕೂಗುತ್ತಾ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಪಕ್ಷದ ಮುಖಂಡ ಶಿವನಗೌಡ ಬನಪ್ಪಗೌಡ್ರ ಮಾತನಾಡಿ, ‘ದೇಶವನ್ನು ಅಭಿವೃದ್ದಿಯತ್ತ ಕೊಂಡ್ಯೊಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ದೇಶದ ಪ್ರತಿಯೊಬ್ಬರ ಪ್ರಜೆಯ ಮಹಾದಾಸೆಯಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲು ಸಾಧ್ಯವಾಗಿದೆ. ಹಾಗೆಯೇ ಕೊಪ್ಪಳ ಕ್ಷೇತ್ರದಲ್ಲಿಯೂ ಕೂಡಾ ಈ ಹಿಂದೆ ಸಂಸದರಾಗಿ ಮಾಡಿದ ಉತ್ತಮ ಕೆಲಸಗಳು ಮತ್ತು ಮುಂದೆಯೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲಿ ಎಂಬ ಕಾರಣ ಇಲ್ಲಿಯ ಜನರು ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ ಎಂದು ನುಡಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಅಂದಯ್ಯ ಕಳ್ಳಿಮಠ, ಮಾಜಿ ಸದಸ್ಯ ಸಿದ್ರಾಮೇಶ ಬೇಲೇರಿ ಮಾತನಾಡಿ, ‘ಮೋದಿ ಅವರು ತಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೇ ಸ್ವಚ್ಛ ಆಡಳಿತ ನಡೆಸಿ ವಿದೇಶಿ ನಾಯಕರ ಮನ್ನಣೆ ಪಡೆದು ಅನುಕರಣೆ ಮಾಡುವಂತೆ ಬದಲಾವಣೆ ತಂದಿದ್ದು ದೇಶದ ಜನತೆಗೆ ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ’ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ ಅರಕೇರಿ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಬಸವಲಿಂಗಪ್ಪ ಕೊತ್ತಲ್, ಅಂಬರೀಶ ಹುಬ್ಬಳ್ಳಿ, ಮುಖಂಡರಾದ ಶಿವಕುಮಾರ ಭೂತೆ, ಸಂಗಪ್ಪ ರಾಮತಾಳ, ದಾನನಗೌಡ, ನೀಲನಗೌಡ ತಳುವಗೇರ, ಈರಪ್ಪ ಬಣಕಾರ, ಮೈನುಸಾಬ ವಣಗೇರಿ, ಸುರೇಶ ಮಾಟರ, ಶಿವನಂದ ಬಣಕಾರ, ಶಂಕರ ಭಾವಿಮನಿ, ದೊಡ್ಡಯ್ಯ ಗುರುವಿನ, ವೀರೇಶ ತಳುವಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.