ADVERTISEMENT

ಶಂಕರಾಯ ಜಪಯಜ್ಞ ಆರಂಭ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 17:00 IST
Last Updated 21 ಏಪ್ರಿಲ್ 2021, 17:00 IST
ಗಂಗಾವತಿಯ ಶಂಕರ ಮಠದಲ್ಲಿ ನಮಃ ಶಂಕರಾಯ ಜಪಯಜ್ಞ ಸಾಮೂಹಿಕ ಪಠಣ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಲಾಯಿತು
ಗಂಗಾವತಿಯ ಶಂಕರ ಮಠದಲ್ಲಿ ನಮಃ ಶಂಕರಾಯ ಜಪಯಜ್ಞ ಸಾಮೂಹಿಕ ಪಠಣ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಲಾಯಿತು   

ಗಂಗಾವತಿ: ನಗರದ ಶಂಕರ ಮಠದಲ್ಲಿ ನಮಃ ಶಂಕರಾಯ ಜಪಯಜ್ಞ ಸಾಮೂಹಿಕ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಚಾಲನೆ ನೀಡಿ ಮಾತನಾಡಿ,‘ಶೃಂಗೇರಿ ಪೀಠದ ಪೀಠಾಧಿಪತಿಗಳಾದ ಶ್ರೀಭಾರತಿ ತೀರ್ಥ ಸ್ವಾಮಿಗಳರವರ ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀಶಂಕರ ತತ್ತ್ವ ಪ್ರಸಾರ ಅಭಿಯಾನ ಅಡಿಯಲ್ಲಿ ನಮಃ ಶಂಕರಾಯ ಜಪಯಜ್ಞ ನಡೆಯಲಿದೆ. ಏ.18 ರಂದು ಆರಂಭವಾಗಿದ್ದು, ಮೇ.18 ರವರೆಗೆ ಪ್ರತಿಯೊಂದು ಮನೆ ಹಾಗೂ ಶ್ರೀಮಠದಲ್ಲಿ ಜರುಗಲಿದೆ. ಎಲ್ಲರೂ ಪಾಲ್ಗೊಳ್ಳಬಹುದು. ಒಟ್ಟು 11 ಲಕ್ಷಕ್ಕೂ ಅಧಿಕ ನಮಃ ಶಂಕರಾಯ ಜಪಯಜ್ಞ ಜರುಗಲಿದೆ’ ಎಂದರು.

ದೇವಸ್ಥಾನದ ಅರ್ಚಕ ಕುಮಾರ ಭಟ್, ಎಸ್.ವಿ.ಜೋಷಿ, ಬಾಲಕೃಷ್ಣ ದೇಸಾಯಿ, ಪ್ರಮುಖರಾದ ಜಗನ್ನಾಥ ರಾವ್ ಅಳವಂಡಿಕರ್, ದತ್ತಾತ್ರೇಯ ಹೊಸಳ್ಳಿ, ಸುದರ್ಶನ ವೈದ್ಯ ಸೇರಿದಂತೆ ಶಾರಾದ ಭಜನಮಂಡಳಿಯ ಮಹಿಳಾ ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.