
ಕೊಪ್ಪಳ: ‘ಮಹಾಶಿವರಾತ್ರಿ ಬಳಿಕ ಡಿ.ಕೆ. ಶಿವಕುಮಾರ್‌ಗೆ ಮಾತ್ರವಲ್ಲ, ಪೂರ್ಣ ರಾಜ್ಯಕ್ಕೆ ಒಳ್ಳೆಯದಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
‘ಶಿವರಾತ್ರಿ ಬಳಿಕ ಒಳ್ಳೆಯದಾಗಲಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ‘ರಾಜ್ಯಕ್ಕೇ ಒಳ್ಳೆಯದು ಆಗಲಿದೆ’ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
'ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಹಿಂದೆ ಹಲವು ಬಾರಿ ಮಾತನಾಡಿದ್ದೇನೆ. ಮತ್ತೆ ಈಗ ಅದರ ಬಗ್ಗೆ ಮಾತನಾಡುವುದಿಲ್ಲ' ಎಂದರು.
‘ಸರ್ಕಾರದ ಮೇಲೆ ಆರೋಪ ಮಾಡಲು ಗುರುತರವಾದ ಕಾರಣವಿಲ್ಲದ್ದರಿಂದ ಪ್ರತಿಪಕ್ಷಗಳು ನನ್ನನ್ನು ಸೂಪರ್ ಸಿ.ಎಂ. ಎಂದು ಟೀಕಿಸುತ್ತಿವೆ. ಆದರೆ ನಾನು ಸರ್ಕಾರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಂದೆ ಹಾಗೂ ನನಗೆ ಹತ್ತಿರ ಇರುವ ಎಲ್ಲರಿಗೂ ಇದು ಗೊತ್ತಿದೆ’ ಎಂದರು.
‘ಸಾಮಾಜಿಕ ನ್ಯಾಯದಲ್ಲಿ ತಂದೆ ಬಲವಾಗಿ ನಂಬಿಕೆ ಇಟ್ಟುಕೊಂಡಿದ್ದು ನಾನು ಅದನ್ನೇ ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಆಧಾರ ರಹಿತವಾಗಿ ಯಾರು ಟೀಕೆ ಮಾಡುತ್ತಿದ್ದಾರೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಜನ ದಡ್ಡರಲ್ಲ; ವಿನಾಕಾರಣದ ಟೀಕೆಗಳಿಗೆ ಜನ ಯೋಚಿಸಲು ಕೂಡ ಹೋಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.