
ಯಲಬುರ್ಗಾ: ತಾಲ್ಲೂಕಿನ ಗೆದಗೇರಿ ಗ್ರಾಮದ ಶರಣಬಸವೇಶ್ವರ ಜಾತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮೂಹಿಕ ವಿವಾಹ, ಉತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದ ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಹಿರೇಮಠದ ಕರಿಬಸವ ಶಿವಾಚಾರ್ಯರು, ‘ಹಣದಿಂದ ಶ್ರೀಮಂತನಾಗುವುದು ಮುಖ್ಯವಲ್ಲ, ಗುಣದಿಂದ ಶ್ರೀಮಂತನಾಗುವುದು ಮುಖ್ಯ. ಯುವಕರು ಸದ್ಗುಣಗಳಿಂದ ಮಾದರಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ ಎಂದರು.
ತಾ.ಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್‌ಪಾಟೀಲ, ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಮಲ್ಲಯ್ಯ ಶಾಸ್ತ್ರಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಉದ್ಯಮಿ ಸುಭಾಷ ರಾಜೂರ, ಪರಿವರ್ತನ ಗೆಳೆಯರ ಬಳಗದ ಪ್ರಮುಖರಾದ ಶಿವಯ್ಯ ಹಿರೇಮಠ, ಮಹಾಂತೇಶ ದೇಸಾಯಿ, ಆಡಿ ಹನುಮಂತರಾವ್ ಸಾಳುಂಕೆ, ಶರಣಪ್ಪ ಹಿರೇಮನಿ, ದೇವರಾಜ ದೊಡ್ಡಮನಿ, ವೀರಯ್ಯ ಹಿರೇಮಠ, ಶಿವಕುಮಾರ ಮರಿಗೌಡರ, ರವಿ ದೊಡ್ಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.