ADVERTISEMENT

ಅಂತರ ಬೇಸಾಯ ಕೈಗೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:35 IST
Last Updated 3 ಜನವರಿ 2012, 8:35 IST

ಶ್ರೀರಂಗಪಟ್ಟಣ: ಕಬ್ಬು ಬೆಳೆಯಲ್ಲಿ ಇತರ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಹೆಚ್ಚಿನ ಆದಾಯ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್ ಸಲಹೆ ನೀಡಿದರು.

  ಇಲ್ಲಿಗೆ ಸಮೀಪದ ಪಶ್ಚಿಮ ವಾಹಿನಿ ಬಳಿ ಕಬ್ಬು ಅಭಿವೃದ್ಧಿ ಯೋಜನೆಯಡಿ ರೈತರು ಕೈಗೊಂಡಿರುವ ಅಂತರ ಬೇಸಾಯದ ತಾಕಿಗೆ ಈಚೆಗೆ ಭೇಟಿ ನೀಡಿದ್ದ  ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಬ್ಬು ಬೆಳೆಯ ಜತೆಗೆ ಟೊಮೆಟೊ, ಬೀನ್ಸ್, ಬೆಂಡೆ ಬೆಳೆಯ ಬಹುದು. ಈರುಳ್ಳಿ, ಕೊತ್ತಂಬರಿ ಸೊಪ್ಪು ಬೆಳೆಯುವುದರಿಂದ ಕಬ್ಬು ಬೆಳೆಗೆ ಉತ್ತಮ ಪೋಷಕಾಂಶಗಳು ಸಿಗುತ್ತವೆ ಎಂದು ಹೇಳಿದರು.

  ಕೃಷಿ ಇಲಾಖೆಯಲ್ಲಿ ರೈತರಿಗೆ ಸಾಕಷ್ಟು ಸವಲತ್ತುಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರು ಬೇಸಾಯದ ಜತೆಗೆ ಹಸು, ಕುರಿ, ಕೋಳಿ ಸಾಕಣೆಯಂತಹ ಉಪ ಕಸುಬುಗಳನ್ನು ಅನುಸರಿಸಬೇಕು. ಇದರಿಂದ ಕೃಷಿಯಲ್ಲಿ ಉಂಟಾಗುವ ನಷ್ಟದಿಂದ ಪಾರಾಗಲು ಸಾಧ್ಯ ಎಂದರು. ಕೃಷಿ ಸ್ಥಾಯಿ ಸಮಿತಿ ಸದಸ್ಯರಾದ ಎ.ಎಲ್.ಕೆಂಪೂಗೌಡ, ಶಂಕರೇಗೌಡ, ಕೃಷಿ ಇಲಾಖೆ ಸಹಾ ಯಕ ನಿರ್ದೇಶಕಿ ಎಚ್.ಎನ್. ಮಮತಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.